SUDDILIVE || AGUMBE
ಆಗುಂಬೆ-ಕಚ್ಚಾಬಾಂಬ್ ಸ್ಪೋಟಗೊಂಡು ವೃದ್ಧೆಯ ಕೈ ಹಾನಿ-Agumbe-Nadabomb explodes and injures an old woman's hand
ಹಂದಿ ಶಿಕಾರಿ ಮಾಡಲು ಇಟ್ಟಿದ್ದ ಕಚ್ಚಾಬಾಂಬ್ ಸ್ಪೋಟಗೊಂಡು ವೃದ್ಧೆಯ ಕೈ ಸಂಪೂರ್ಣ ಹಾನಿಗೊಂಡ ಘಟನೆ ನೆಂಟೂರು ಬಳಿ ನಡೆದಿದೆ.
ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ವರ್ಷ) ಗಾಯಗೊಂಡ ಮಹಿಳೆಯಾಗಿದ್ದಾರೆ. ನಿನ್ನೆ ಸಂಜೆ ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಸಿಪ್ಪೆ ಒಳಗೆ ಕಚ್ಚಾ ಬಾಂಬ್ ಇಡಲಾಗಿತ್ತು. ಅದನ್ನು ನಾಯಿ ಕಚ್ಚಿಕೊಂಡು ಕಮಲಮ್ಮನವರ ಮನೆಯ ಅಂಗಳಕ್ಕೆ ತಂದಿದೆ. ಅದನ್ನು ವೃದ್ದೆ ಅಡಿಕೆ ಎಂದು ಕತ್ತಿಯಿಂದ ಕುಟ್ಟಿದೆ. ಅಷ್ಟ್ರಕ್ಕೆ ಬಾಂಬ್ ಸಿಡಿದು ಕಮಲಮ್ಮ ಅವರ ಕೈ ಸಂಪೂರ್ಣ ಸುಟ್ಟು ಗಾಯವಾಗಿದೆ.
ಪೊಲೀಸ್ ಮಾಹಿತಿಯಂತೆ ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಟ್ಟು ಹಂದಿ ಶಿಕಾರಿ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಅದರಿಂದ ಇಂತಹ ಅವಘಡ ಆಗಿದೆ ವೃದ್ಧೆ ಕಮಲಮ್ಮರನ್ನ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಂಗ್ ಪಿನ್ ಗಳ ಕೈವಾಡದ ಶಂಕೆ
ಈ ಕಚ್ಚಾ ಬಾಂಬ್ ಸ್ಪೋಟದ ಹಿಂದೆ ಹೊನ್ನೇತಾಳು ಗ್ರಾಮಪಂಚಾಯಿತಿಯ ಕಿಂಗ್ ಪಿನ್ ಒಬ್ಬರ ಕೈವಾಡದ ಶಂಕೆಯನ್ನ ವ್ಯಕ್ತಪಡಿಸಲಾಗಯತ್ತಿದೆ. ಈ ಹಿಂದೆ ಕಾಡುಪ್ರಾಣಿಗಳ ಬೇಟೆಗಾಗಿ ಹಲಾರೂ ಬಾರಿ ಬಾಂಬ್ ಇಟ್ಟಿದ ಶಂಕೆ ವ್ಯಕ್ತವಾಗುತ್ತಿದೆ. ಈ ಹಿಂದೆ ಅವಿನಾಶ್ ಎಂಬುವರ ಮನೆಯಲ್ಲೇ ಬಾಂಬ್ ಸ್ಪೋಟಗೊಂಡಿತ್ತು. ಇದರಲ್ಲೂ ಕಿಂಗ್ ಪಿನ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಂಡಕಂಡಲ್ಲಿ ಕಾಡು ಪ್ರಾಣಿಗಳ ಭೇಟೆ ಆಗುವುದು ಈ ಕಿಂಗ್ ಪಿನ್ ಗಳ ಅಭ್ಯಾಸವಾಗಿದೆ ಎನ್ನುತ್ತಾರೆಸ್ಥಳೀಯರು.
Agumbe-Nadabomb explodes and injures an old woman's hand


