ಬಿಎಸ್ ವೈ ಅಭಿಮಾನೋತ್ಸವಕ್ಕೆ ಶಿವಮೊಗ್ಗದಿಂದ 450 ಖಾಸಗಿ ಬಸ್ ವ್ಯವಸ್ಥೆ - 450 private buses from Shivamogga for BSY celebration

SUDDILIVE || SHIVAMOGGA

ಬಿಎಸ್ ವೈ ಅಭಿಮಾನೋತ್ಸವಕ್ಕೆ ಶಿವಮೊಗ್ಗದಿಂದ 450 ಖಾಸಗಿ ಬಸ್ ವ್ಯವಸ್ಥೆ - 450 private buses from Shivamogga for BSY celebration   

Bsy, bus

Bsy, bus

ಬಿಎಸ್ವೈ- 50 ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಬಿಎಸ್ವೈ ತವರು ಜಿಲ್ಲೆಯಿಂದ ಕಾರ್ಯಕರ್ತರು ಮತ್ತು ಮುಖಂಡರು ಕಾರಗಯಕ್ರಮಕ್ಕೆ ತೆರಳಿದ್ದು, ಸೈನ್ಸ್ ಮೈದಾನದಿಂದ ಖಾಸಗಿ ಬಸ್ ಗಳಲ್ಲಿ ತೆರಳಿದ್ದಾರೆ. 

ಶಿವಮೊಗ್ಗ ಜಿಲ್ಲೆಯಿಂದ ಚಿತ್ರದುರ್ಗಕ್ಕೆ 450 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬಿಎಸ್ವೈ ತವರು ಕ್ಷೇತ್ರ ಶಿಕಾರಿಪುರದಿಂದಲೇ 150 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಭದ್ರಾವತಿ-44, ಹೊಸನಗರ -20, ಸಾಗರ-35, ಶಿವಮೊಗ್ಗ ನಗರ- ಗ್ರಾಮಾಂತರ -102, ತೀರ್ಥಹಳ್ಳಿ-49, ಸೊರಬ-30 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. 

ಬಸ್ ಜೊತೆಗೆ 100 ಕ್ಕೂ ಹೆಚ್ಚು ಕಾರು, ಟ್ಯಾಕ್ಸಿ, ಬೈಕ್ ನಲ್ಲಿ  ಬಿಎಸ್ವೈ ಅಭಿಮಾನಿಗಳು ತೆರಳಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಸುಮಾರು 60 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಶಿವಮೊಗ್ಗದಿಂದ 9.30 ಕ್ಕೆ  ಬಸ್ ಹಾಗೂ ಕಾರುಗಳು ಹೊರಟಿದ್ದಾರೆ. 

ತಿಂಡಿ ವ್ಯವಸ್ಥೆ

ಶಿವಮೊಗ್ಗ ನಗರದಿಂದ ಹೊರಡುವ ಮುಖಂಡರು- ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಶಿವಮೊಗ್ಗ ನಗರ- ಗ್ರಾಮಾಂತರ ಭಾಗದ ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. 

ನಗರದ ವಿವಿಧ ವಾರ್ಡ್ ಗಳಿಂದ ಕಾರ್ಯಕ್ರಮಕ್ಕೆ ತೆರಳುವ ಕಾರ್ಯಕರ್ತರು ಮುಖಂಡರು ಉಪಹಾರ ಸೇವಿಸಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಶಾಸಕ ಚೆನ್ನಬಸಪ್ಪ, ವ್ಯವಸ್ಥೆ ಪರಿಶೀಲಿಸಿದ್ದಾರೆ. 

450 private buses from Shivamogga for BSY celebration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close