SUDDILIVE || SHIVAMOGGA
ಶಿವಮೊಗ್ಗ ಏರ್ ಪೋರ್ಟ್ ಗೆ ಬಂದಿಳಿದಿದ್ದ ಗೃಹ ಸಚಿವರು- Home Minister arrives at Shivamogga Airport
ಬಂಗಾಳದಲ್ಲಿ ಹೊಸ ಮುಖ್ಯ ಮಂತ್ರಿಗಳ ಪದಗ್ರಹಣ ಕಾರ್ಯಕ್ರಮ ಮುಗಿಸಿಕೊಂಡು ಚಿತ್ರದುರ್ಗದಲ್ಲಿ ನಡೆಯುವ ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ತೆರಳುವಾಗ ಗೃಹಸಚಿವ ಅಮಿತ್ ಶಾ ಶಿವಮೊಗ್ಗದ ಏರ್ ಪೋರ್ಟ್ ಗೆ ಬಂದಿಳಿದಿದ್ದಾರೆ.
ಈ ವೇಳೆ ಎಡಿಜಿಪಿ ಎಸ್ ಮುರುಗನ್ , ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಜಿಪಂ ಸಿಇಒ ಹೇಮಂತ್ ಕುಮಾರ್ ಹುಗುಚ್ಚ ನೀಡಿ ಅಮಿತ್ ಶಾ ರನ್ನ ಗೌರವ ವಂದಿಸಿ ಸ್ವಾಗತಿಸಿದ್ದಾರೆ.
ಬಂಗಾಳದಿಂದ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3-30 ಕ್ಕೆ ಬಂದಿಳಿದ ಗೃಹಸಚಿವರು ಅಧಿಕಾರಿಗಳ ಗೌರವ ವಂದನೆ ಸ್ವೀಕರಿಸಿ ತಕ್ಷಣವೇ ಚಿತ್ರದುರ್ಗಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದಾರೆ. ಚಿತ್ರದುರ್ಗದಲ್ಲಿ ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ತೆರಳಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.
Home Minister arrives at Shivamogga Airport
