ಲಾರಿ ಸಮೇತ ಅಡಿಕೆ ಚೀಲ ಪತ್ತೆ- A bag of areca nuts was found with the lorry

SUDDILIVE || SHIVAMOGGA

ಲಾರಿ ಸಮೇತ ಅಡಿಕೆ ಚೀಲ ಪತ್ತೆ- A bag of areca nuts was found with the lorry   


Areca, nuts

ಮೊಹಮದ್ ಗೌಸ್ ಮತ್ತು ನೌಶದ್ ರವರು ಲಾರಿ ಮಾಲೀಕ ಸದ್ದಾಂ ಜೊತೆ ಹೋಗಿ ಬೆಂಗಳೂರಿಗೆ ತೆರಳಬೇಕಿದ್ದನ್ನ ತಮಗೆ ಬೇಕಾದ ಕಡೆ ದಿಕ್ಕಿನಲ್ಲಿ ಲಾರಿಯನ್ನು ಚಲಾಯಿಸಿ 350 ಅಡಿಕೆ  ಚೀಲವನ್ನ ಮಾರಾಟ ಮಾಡಿದ್ದರು. ಈ ಪ್ರಕಾರಣ ಹೊಳೆಹೊನ್ನೂರು  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹೆಚ್ ಕೃಷ್ಣಪೂಜಾರಿ ಬಿನ್ ಲೇಟ್ ಹಿರಿಯಣ್ಣ 67 ವರ್ಷ, ಹಿರಿಯ ಕಾರ್ಯನಿರ್ವಾಹಕ ಕೆಲಸ ಬುದ್ದಾನಗರ ಶಿವಮೊಗ್ಗ ರವರು ದಿನಾಂಕ 28/03/2026 ರಂದು ಸಂಜೆ  ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ,  ಶಿವಮೊಗ್ಗದಲ್ಲಿರುವ ಭಾರತ್ ಟ್ರಾನ್ಸ್ ಪೋರ್ಟ್ ನ ಪ್ರೋಪರೇಟರ್ ಆದ ಮೊಹಮದ್ ಯಾಹ್ಯ @ ರಾಜೀಕ್ ಭಾಯಿ ರವರಿಗೆ ಶಿವಮೊಗ್ಗ ಮ್ಯಾಮ್ಕೋಸ್ ಗೆ ಅಡಿಕೆಯನ್ನು ತುಂಬಿಕೊಂಡು ಹೋಗಲು ಒಂದು ಲಾರಿ ಯನ್ನು ಕಳುಹಿಸಿಕೊಡಿ ಅಂತಾ ತಿಳಿಸಿದ್ದು ಅದರಂತೆ ಲಾರಿಯನ್ನು ಕಳುಹಿಸಿಕೊಟ್ಟಿದ್ದು ನಂತರ ಮ್ಯಾಮ್ಕೋಸ್ ನವರು ಸದರಿ ಲಾರಿಗೆ 350 ಚೀಲ ಅಡಿಕೆಯನ್ನು ಲೋಡ್ ಮಾಡಿ ಬೆಂಗಳೂರು ಯಶವಂತ ಪುರಕ್ಕೆ ತೆಗೆದುಕೊಂಡು ಹೋಗಲು ಲಾರಿ ಚಾಲಕ/ಮಾಲೀಕನಾದ ಮುಹಿಬುಲ್ಲಾ ಖಾನ್ @ ಸದ್ದಾಮ್ ರವರಿಗೆ ತಿಳಿಸಿರುತ್ತಾರೆ, ಅದರಂತೆ ಮುಹಿಬುಲ್ಲಾ ಖಾನ್ @ ಸದ್ದಾಮ್ ರವರು ದಿನಾಂಕ: 26.03.2026 ರಂದು ರಾತ್ರಿ 11.00 ಗಂಟೆಗೆ ಅಡಿಕೆ ತುಂಬಿದ ಲಾರಿ ಯನ್ನು ಬೆಂಗಳೂರು ಕಡೆಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದು ನಂತರ  ಲಾರಿ ಯಶವಂತಪುರಕ್ಕೆ ಹೋಗದೆ ಇದ್ದು ನಂತರ ಹುಡುಕಾಡಲಾಗಿ ಮುಹಿಬುಲ್ಲಾ ಖಾನ್ @ ಸದ್ದಾಮ್ ದಿನಾಂಕ:27.03.2026 ರಂದು ಶಿವಮೊಗ್ಗದಲ್ಲಿ ಸಿಕ್ಕಿದ್ದು ವಿಚಾರಿಸಲಾಗಿ ಶಿವಮೊಗ್ಗ ವಾಸಿ ಮೊಹಮದ್ ಗೌಸ್ ಮತ್ತು ನೌಶದ್ ರವರು ನನ್ನ ಜೊತೆ ಲಾರಿಯಲ್ಲಿ ಬಂದು ಹೊಳೆಹೊನ್ನೂರು ಕೈಮರ ಬಳಿ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ 12.20 ಗಂಟೆಗೆ ಬಂದು ಮೂರು ಜನರು ಸೇರಿಕೊಂಡು ಲಾರಿಯಲ್ಲಿದ್ದ ಅಡಿಕೆಯನ್ನು ನಾನು, ಮೊಹಮದ್ ಗೌಸ್, ನೌಶದ್ ರವರು ಸೇರಿಕೊಂಡು ಮಾರಾಟ ಮಾಡೋಣ ಇದರಿಂದ ಬಂದ ಹಣವನ್ನು ಹಂಚಿಕೊಳ್ಳೋಣ ಅಂತಾ ಮಾತನಾಡಿಕೊಂಡು ಕೈಮರದಿಂದ ಹೊರಟಿದ್ದು ನಂತರ ಚಿತ್ರದುರ್ಗ ಹಿರಿಯೂರು ಬಳಿ ಮೊಹಮದ್ ಗೌಸ್ ಮತ್ತು ನೌಶದ್ ರವರು ನೀನು ಹೋಗು ನಾವುಗಳು ಅಡಿಕೆಯನ್ನು ಮಾರಾಟ ಮಾಡಿಕೊಂಡು ಬರುತ್ತೇವೆ ಬಂದ ಹಣವನ್ನು ಹಂಚಿ ಕೊಳ್ಳೋಣ ಅಂತಾ ತಿಳಿಸಿದ್ದು ನಂತರ ತಿಳಿಯಲಾಗಿ ಲಾರಿ ಚಾಲಕ/ಮಾಲೀಕನಾದ ಸದ್ದಾಮ್, ಮೊಹಮದ್ ಗೌಸ್, ನೌಶದ್ ರವರು ಮೂರು ಜನರು ಸೇರಿಕೊಂಡು ಅಡಿಕೆಯನ್ನು ಲಪಟಾಸಿ ಕೊಂಡು ಸಮಾನ ಉದ್ದೇಶದಿಂದ ಮೋಸ ಮತ್ತು ನಂಬಿಕೆ ದ್ರೋಹ ಮಾಡಿ ಲಾರಿಯಲ್ಲಿದ್ದ ಅಡಿಕೆಯನ್ನು ತೆಗೆದುಕೊಂಡು ಹೋದವರು ಹಾಗೂ ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು 350 ಚೀಲ ಅಡಿಕೆಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ನಂ:-95/2026 ಕಲಂ 316(2),318(4) ಬಿ ಎನ್ ಎಸ್ ಕಾಯ್ದೆ-2023 ರಿತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 

ಪ್ರಕರಣದಲ್ಲಿ ಮಾಲು ಹಾಗೂ ಅರೋಪಿತರ ಪತ್ತೆಗಾಗಿ  ನಿಖಿಲ್.ಬಿ ಐಪಿಎಸ್,  ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ ಪ್ರಕಾಶ್ ರಾಥೋಡ್ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ  ಶಿವಪ್ರಸಾದ್ ಎಂ, ಪೊಲೀಸ್ ಇನ್ಸ್ಪೆಕ್ಟರ್ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್ಐ ಶ್ರಿಮತಿ ಶಾಂತಲಾ ಹಾಗೂ ಸಿಬ್ಬಂದಿಗಳಾದ ಹೆಚ್ಸಿ  ಅಣ್ಣಪ್ಪ, ಹೆಚ್ಸಿ  ಪ್ರಕಾಶ ನಾಯ್ಕ, ಹೆಚ್.ಸಿ  ನಾಗರಾಜ, ಹೆಚ್ಸಿ  ಕುಬೇರನಾಯ್ಕ ಹೆಚ್.ಸಿ  ಪ್ರಶಾಂತ, ಎಹೆಚ್ಸಿ , ಪ್ರವೀಣ್ ಹಂಪೋಳ್ ಹಾಗೂ ಪಿಸಿ  ವಿಶ್ವನಾಥ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಮತ್ತು ಇಂದ್ರೇಶ ರವರುಗಳನ್ನು ಒಳಗೊಂಡ ತಂಡ ದಿನಾಂಕ :-30-04-2026 ರಂದು ಬಾತ್ಮೀದಾರರ ಮಾಹಿತಿ ಮೇರೆಗೆ ಕೋಡಿಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೋಸ ಮಾಡಿ ತೆಗೆದುಕೊಂಡು ಹೋಗಿದ್ದ ಲಾರಿ ಹಾಗೂ ಅದರಲ್ಲಿದ್ದಂತಹ ಒಟ್ಟು 1.09.36.800/- (1 ಕೋಟಿ 9 ಲಕ್ಷದ 36 ಸಾವಿರದ 800 ರೂ ಬೆಲೆ ಬಾಳುವ ರಾಶಿ ಅಡಿಕೆ) ಮತ್ತು ಕೃತ್ಯಕ್ಕೆ ಉಪಯೋಗಿಸಿದ ಲಾರಿಯ ಅಂದಾಜು ಬೆಲೆ 20.00000/-(20ಲಕ್ಷ) ಒಟ್ಟಾರೆಯಾಗಿ 1,29,36,800/- ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

A bag of areca nuts was found with the lorry   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close