ಜೋಗದಲ್ಲಿ ಬಂಡೆ ಬಿದ್ದಿದ್ದು ಹೌದಾ? ಡಿಡಿ ಸ್ಪಷ್ಟನೆ ಏನು? Is it true that a rock fell during the jog? What is DD's explanation?

SUDDILIVE || JOGA

ಜೋಗದಲ್ಲಿ ಬಂಡೆ ಬಿದ್ದಿದ್ದು ಹೌದಾ? ಡಿಡಿ ಸ್ಪಷ್ಟನೆ ಏನು? Is it true that a rock fell during the jog? What is DD's explanation?    

Jog, rock

ಜೋಗ ಜಲಪಾತದ ರಾಕೆಟ್ ಫಾಲ್ಸ್ ಭಾಗದ ಬಂಡೆ ಒಂದು ಪದರ ಗುರುವಾರ ಮದ್ಯಾಹ್ನ ಎರಡು ಗಂಟೆ ಸುಮಾರಿಗೆ ಕಳಿಸಿ ಬಿದ್ದಿದ್ದು ಬಾರಿ ಪ್ರಮಾಣದ ಶಬ್ದಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆದರೆ ಪ್ರವಾಸೋಧ್ಯ ಇಲಾಖೆ ಇದನ್ನ ಅಲ್ಲಗೆಳೆದಿದೆ.

ಜೋಗದಲ್ಲಿ ರಾಜಾರಾಣಿ ರೂರಲ್ ರಾಕೆಟ್ ಎಂದು ನಾಲ್ಕು ಭಾಗವಾಗಿ ಬೀಳುವ ಜಲಪಾತದಲ್ಲಿ ರಾಕೆಟ್ ಜಲಪಾತದ ಕೆಳಭಾಗದಲ್ಲಿ ನೂರು ಅಡಿಯಿಂದ ಬಂಡೆಯೊಂದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಂಡೆ ಬಿದ್ದ ರಭಸಕ್ಕೆ ರಾಜ ಮತ್ತು ರೋರರ್ ಕೆಳಗಿನ ಕೊಳ್ಳದ ನೀರು ಪೂರ್ತಿಯಾಗಿ ಕಲಕಿ ಹೋಗಿದೆ ಮಣ್ಣು ನೀರಾಗಿ ಪರಿವರ್ತನೆಯಾಗಿದೆ ಬಿರು ಬೇಸಿಗೆ ಆಗಿದ್ದರಿಂದ ಜಲಪಾತದಲ್ಲಿ ನೀರಿನ ಅರಿವು ಕಡಿಮೆ ಇರುವುದರಿಂದ ಬಂಡೆಗಳು ಬಿಸಿಲಿನ ತಾಪಕೆ ಕಾದು ಬಿರುಕು ಕಾಣಿಸಿಕೊಂಡು ಕುದಿದು ಬಿದ್ದಿರಬಹುದೆಂದು ಶಂಕಿಸಲಾಗಿದೆ

ಜೋಗದಲ್ಲಿ ಬಂಡೆ ಮೇಲಿಂದ ಕೆಳಗೆ ಬೀಳುವುದು ಇದೇನು ಮೊದಲ ಬಾರಿ ಏನಲ್ಲ ಹಿಂದೆಯೂ ಈ ರೀತಿ ಅನೇಕ ಬಾರಿ ಹಾಗಿದೆ ಆದರೆ ಈ ಬಾರಿ ಮಾತ್ರ ಅತ್ಯಂತ ದೊಡ್ಡ ಪ್ರಮಾಣದ ಬಂಡೆ ಕಳಚಿ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಆದರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಧರ್ಮಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಅಂತಹದ್ದೇನು ಯೋಗದಲ್ಲಿ ನಡೆದಿಲ್ಲ ನಾನು ಬೆಳಿಗ್ಗೆಯಿಂದ ಮಧ್ಯಾಹ್ನ 3:00 ವರೆಗೆ ಜೋಗದಲ್ಲೇ ಇದ್ದೆ ಅಂತಹ ಸ್ಪಷ್ಟನೆ ನೀಡಿದ್ದಾರೆ. ಬಂಡೆ ಬಿದ್ದಿರುವುದನ್ನು ವೀಕ್ಷಿಸಿದವರು ಯಾರು ಇಲ್ಲವಾದರೂ ನೀರು ಮಣ್ಣ ಮಣ್ಣು ನೀರಾಗಿ ಪರಿವರ್ತನೆಗೊಂಡಿರುವ ಬಗ್ಗೆ ಈಗ ಹಲವು ಸಂಶಯಗಳನ್ನು ಹೊತ್ತು ಹಾಕಿವೆ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳುತ್ತದೆ ತನಿಖೆ ನಡೆಸುತ್ತದೆ ಎಂಬುದು ಕುತೂಹಲಕಾರಿ ಆಗಿದೆ.

ಇನ್ನೂ ಜೋಗದ ಅಭಿವೃದ್ಧಿಗಾಗಿ 183 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬರದಿಂದ ಸಾಗುತ್ತಿವೆ. ಈ ನಡುವೆ ಈ ಘಟನೆ ಪ್ರವಾಸಿಗರಿಗೆ ಆತಂಕ ಮೂಡಿಸುವಂತದ್ದಾಗಿದೆ.‌

Is it true that a rock fell during the jog? What is DD's explanation? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close