SUDDILIVE || SHIVAMOGGA
ಸೊರಬದಲ್ಲಿ ಬಹಿಷ್ಕಾರದ ಕೂಗು-A cry of boycott in Soraba
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ನಲ್ಲಿ ಬಹಿಷ್ಕಾರದ ಕೂಗು ಜೋರಾಗಿದ್ದು ಕಾನ್ ಕೆರಿವಾಸಿ ಈರಪ್ಪ ಎಂ ಬಿ ಅವರು ಕಳೆದ ನಾಲ್ಕು ವರ್ಷಗಳಿಂದ ಐಶ್ವರ್ಯ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಸೊರಬ ತಾಲೂಕು, ಕುಪ್ಪಗಡ್ಡೆ ಹೋಬಳಿ ಸಾರಿಕೊಪ್ಪ ಗ್ರಾಮದ ಕಾಯಂ ನಿವಾಸಿ ಈರಪ್ಪ ಎಂಬಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಊರಿನಿಂದ ಹೊರಗೆ ಇಟ್ಟು ಬಹಿಷ್ಕಾರ ಹಾಕಿ ಗ್ರಾಮಸ್ಥರ ಸಂಪರ್ಕವನ್ನು ದೂರ ಇಟ್ಟಿರುವ ಬಗ್ಗೆ ಸೂಕ್ತ ರಕ್ಷಣೆ ನೀಡುವಂತೆ ಸೊರಬ ಪಿ ಐ ಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ
ಕಳೆದ ಮೂರು ವರ್ಷದಿಂದ ಸಾರಿಕೊಪ್ಪ ಗ್ರಾಮದ ವಾಸಿ ಮಳ್ಳಿ ಹುಚ್ಚರಾಯಪ್ಪ ನಾನೇ ನಾಗರಾಜ್ ಗುಡ್ಡದ ಬಸವರಾಜ ಮಳ್ಳಿ ನಾಗರಾಜ್ ಹುಣ್ಸೆ ಕೊಪ್ಪದ ಕೃಷ್ಣಪ್ಪ ಎಂಬುವರು ಸೇರಿ ಊರಿನ ಹಿರಿತನವನ್ನು ನಡೆಸಿಕೊಂಡು ಬಂದಿದ್ದಾರೆ ಅವರುಗಳು ನಮ್ಮ ಕುಟುಂಬದವರ ವಿರುದ್ಧ ರಾಜಕೀಯ ವೈಷ್ಣವಲಯದಿಂದ ಕೆಲವು ಮುಕ್ತ ಜನರನ್ನು ಎತ್ತಿ ಕಟ್ಟಿ ಜಗಳ ದುಂಬಿ ಮಾಡಲು ಶುರು ಮಾಡಿದ್ದಾರೆ.
ಆ ಬಗ್ಗೆ ಕೇಸು ದಾಖಲಾಗಿ ನ್ಯಾಯಲಕ್ಕು ಓಡಾಡುತ್ತಿದ್ದೇವೆ ಅದನ್ನು ಪಂಚಾಯಿತಿಗೆ ಮೂಲಕ ಬಗೆಹರಿಸಿ ಕೊಡುವಂತೆ ಕೇಳಿ ಗ್ರಾಮಸ್ಥರ ಬಳಿ ಅರ್ಜಿ ಕೊಟ್ಟು ವಿನಂತಿ ಮಾಡಿಕೊಂಡಿರುತ್ತೇನೆ. ಆದರೆ ಸದರಿ ಅರ್ಜಿಯನ್ನು ವಾಪಸ್ ಮಾಡಿದ್ದು ಅಲ್ಲದೆ ನಮ್ಮ ಊರಿನ ಹಳ್ಳಿ ಪದ್ದತಿ ಮತ್ತು ಸಂಪ್ರದಾಯದಂತೆ ಒಟ್ಟ- ಬಿಟ್ಟಿ ದೇವರ ಕಾರ್ಯಗಳ ಹಣ ನೀಡಿದರೂ ಸಹ ಹಣ ಸ್ವೀಕರಿಸದೆ ಏಕಾಯಕಿ ನಮ್ಮನ್ನು ಊರಿನಿಂದ ಹೊರಗಿಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ಊರಿನಿಂದ ಹೊರಗಿಟ್ಟ ಪರಿಣಾಮ ನಮ್ಮ ಹೊಲ ಗದ್ದೆಗಳಿಗೆ ಯಾವ ಕೂಲಿ ಕಾರ್ಮಿಕರು ಬಾರದಂತೆ ನೋಡಿಕೊಂಡು ಯಾರಾದರೂ ಅವರ ತೋಟಕ್ಕೆ ಹೋದರೆ ದಂಡ ಹಾಕುವುದಾಗಿ ಆರೋಪಿಸಿದ್ದಾರೆ.ಗ್ರಾಮದ ದೇವಸ್ಥಾನದ ಯಾವುದೇ ಪೂಜಾ ಕಾರ್ಯಗಳಿಗೆ ಬಾರದಂತೆ ನಮ್ಮನ್ನು ಬಹಿಷ್ಕರಿಸಲಾಗಿದ್ದು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
A cry of boycott in Soraba

