SUDDILIVE || SHIVAMOGGA
ಕೆಲಕಡೆ ವಿದ್ಯುತ್ ಕಂಬ ತೆರವಿಗೆ ವಿದ್ಯುತ್ ವ್ಯತ್ಯಯವಾದರೆ ಕೆಲಕಡೆ ತುರ್ತು ಕಾಮಗಾರಿಗೆ ವಿದ್ಯುತ್ ವ್ಯತ್ಯಯ- In some places, there is a power outage due to the removal of electric poles, while in others, there is a power outage due to emergency work
ಶಿವಮೊಗ್ಗ ನಗರ ಉಪವಿಭಾಗ-1, ಘಟಕ -2 ರ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ವಿದ್ಯುತ್ ಕಂಬ ತೆರವು ಕಾಮಗಾರಿ ಹಮ್ಮಿಕೊಂಡಿದ್ದು ಈ ಕೆಳಗಡೆ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ, ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶನಿ ಮಹಾತ್ಮ ದೇವಸ್ಥಾನ ರಸ್ತೆ, ವಿದ್ಯುತ್ ಪರಿವೀಕ್ಷಕರ ಕಚೇರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ತುರ್ತು ಕಾಮಗಾರಿ; ವಿದ್ಯುತ್ ವ್ಯತ್ಯಯ
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12 ಮತ್ತು 13ರ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳಗ್ಗೆ 09.00 ರಿಂದ ಮಧ್ಯಾಹ್ನ 1.00 ರವರೆಗೆ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆಲ್ಕೋಳ, ಎಸ್.ಎಲ್.ವಿ. ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ ಎ ರಿಂದ ಎಫ್ ಬ್ಲಾಕ್, ಮುನಿಯಪ್ಪ ಲೇಔಟ್, ಸಂಗೋಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ, ಸೋಮಿನಕೊಪ್ಪ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ, ಸೋಮಿನಕೊಪ್ಪ ಗೆಜ್ಜೆನಹಳ್ಳಿ, ಅಂಬೇಡ್ಕರ್ ಕಾಲೋನಿ, ಹನುಮಂತನಗರ, ಜಕಾತಿಕೊಪ್ಪ, ಭೈರವಕೊಪ್ಪ, ದೇವಕಾತಿಕೊಪ್ಪ ಹಾಗೂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
In some places, there is a power outage due to the removal of electric poles, while in others, there is a power outage due to emergency work

