SUDDILIVE || SHIVAMOGGA
ಒಂದು ವಾರದ ಬಳಿಕ ಯುವಕ ಸಾವು-ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ- A week after the youth died, three accused were remanded in judicial custody
ಏ.24 ರಂದು ವಾದಿ-ಏ-ಹುದಾದಲ್ಲಿ ಪ್ರೀತಿಯ ವಿಚಾರದಲ್ಲಿ ನೆತ್ತಿಗೆ ಸಿಲುಕಿಕೊಳ್ಳುವ ಹಾಗೆ ಲಾಂಗ್ ಹೊಡೆತಕ್ಕೆ ಒಳಗಾಗಿದ್ದ 17 ವರ್ಷದ ಅಪ್ರಾಪ್ತ ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪ್ರೀತಿಯ ವಿಚಾರದಲ್ಲಿ ಸೈಯದ್ ಮೌಸೀನ್ ಎಂಬ 17 ವರ್ಷದ ಯುವಕನಿಗೆ ವಾದಿ-ಏ-ಹುದಾ 3 ನೇ ತಿರುವಿನಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಮೌಸಿನ್ ತಲೆಗೆ ಲಾಂಗ್ ಬೀಸಿ ಹೋಗಿದ್ದರು. ತಲೆಯಲ್ಲೇ ಆರೋಪಿತರು ಬೀಸಿದ ಲಾಂಗು ಸಿಲುಕಿಕೊಂಡಿತ್ತು.
ಮೊದಲಿಗೆ ಮೌಸೀನ್ ನನ್ನ ಮೆಗ್ಗಾನ್ ಗೆ ಕರೆದುಕೊಂಡು ಹೋಗಿ ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೌಸೀನ್ ನಿನ್ನೆ ಬೆಂಗಳೂರು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಘಟನೆಯ ವಿವರ
ಸೈಯದ್ ಮೌಸೀನ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಪೊಲೀಸರ ಮಾಹಿತಿಯ ಪ್ರಕಾರ ಮೌಸೀನ್ ಒಂದು ಯುವತಿಯನ್ನ ಪ್ರೀತಿಸುತ್ತಿದ್ದ ಆಕೆಯೊಂದಿಗೆ ವಾಟ್ಸಪ್ ನಲ್ಲಿ ಮೆಸೇಜ್ ಹಾಗೂ ಫೊನ್ ಸಂಪರ್ಕದಲ್ಲಿದ್ದ. ಇದರ ಬೆನ್ನಲ್ಲೇ ಆ ಯುವತಿಗೆ ಮತ್ತೋರ್ವ ಯುವಕ ಸಂಪರ್ಕದಲ್ಲಿದ್ದುದ್ದರಿಂದ ಈ ವಿಷಯ ಮೌಸಿನ್ ಗೆ ತಿಳಿದಿತ್ತು.
ಈ ವಿಚಾರವಾಗಿಯೇ ಮೌಸೀನ್ ಆ ಹುಡುಗನನ್ನ ಮೊಬೈಲ್ ನಲ್ಲಿ ಸಂಪರ್ಕಿಸಿ ನನ್ನ ಯುವತಿಯೊಂದಿಗೆ ಸಂಪರ್ಕದಲ್ಲಿ ಇರಬೇಡ ಎಂದಿದ್ದಾನೆ. ಈ ವಿಷಯದಿಂದ ಕುಪಿತಗೊಂಡ ಯುವಕ ತನ್ನ ಇನ್ನಿಬ್ಬರು ಸಹಚರರೊಂದಿಗೆ ಬಂದು ಮೌಸಿನ್ ನ ತಲೆ ಒಡೆದಿದ್ದಾನೆ. ಘಟನೆ ನಡೆದು ಒಂದುವಾರದ ಬಳಿಕ ಯುವಕ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಕೆಲ ಗಂಟೆಯಲ್ಲೇ ಮಚ್ಚು ಬೀಸಿದ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳ ವಿವರ
ಮೌಸೀನ್ ನ ತಲೆಗೆ ಲಾಂಗು ಬೀಸಿದ ಮೂವರನ್ನ ಗುರುತಿಸಲಾಗಿದೆ. ಸುಹೇಲ್ ಯಾನೆ ಡೇಂಜರ್, ಸುಹೇಲ್ ಯಾನೆ ಸತ್ತಾರ್, ಮತ್ತೋರ್ವ ಸಿಕಂದರ್ ಎಂದು ಗುರುತಿಸಾಗಿದೆ. ಮೂವರನ್ನೂ ನ್ಯಾಉಅಂಗ ಬಂಧನಕ್ಕೊಳಪಡಿಸಲಾಗಿದೆ. ಸುಹೇಲ್ ಯಾನೆ ಡೇಂಜರ್ ಎಂಬಾತ 2023 ರಲ್ಲಿ ನಡೆದ ಗ್ಯಾಂಗ್ ಸ್ಟರ್ ವಾರ್ ನಡೆದಾಗ ನಡೆದ ಡಬಲ್ ಮರ್ಡರ್ ನಲ್ಲಿ ಆರೋಪಿಯಾಗಿದ್ದಾನೆ.
A week after the youth died, three accused were remanded in judicial custody
