SUDDILIVE || SHIVAMOGGA
ಹಣಗೆರೆಕಟ್ಟೆಗೆ ಬಂದಿದ್ದ ಬಾಲಕ ಭದ್ರ ನದಿಯಲ್ಲಿ ಮುಳುಗಿ ಸಾವು-A boy who had come to Hanagerekatte drowned in the Bhadra River and died
ಚಿತ್ರದುರ್ಗ ಜಿಲ್ಲೆಯ ಪಾಮರಹಳ್ಳಿ ಇಂದ ಶಿವಮೊಗ್ಗದ ಹಣೆಗೆರೆ ಕಟ್ಟೆ ಗೆ ಬಂದಿದ್ದ ಕುಟುಂಬವೊಂದು ಭದ್ರಾ ನದಿಯಲ್ಲಿ ಮಗನನ್ನು ಕಳೆದುಕೊಂಡ ದಾರುಣ ಘಟನೆ ನಡೆದಿದೆ.
ಮೇ 2 ರಂದು ಚಿತ್ರದುರ್ಗದ ಪಾಮರಹಳ್ಳಿ ಗ್ರಾಮದಿಂದ ಇಮಾಮ್ ಸಾಬ್ ಎಂಬುವರು ಕೆ 15 ಎ 6187 ಕ್ರಮ ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆಯ ಚೌಡೇಶ್ವರಿ ಭೂತರಾಯ ದೇವಸ್ಥಾನ ಮತ್ತು ಹಜರತ್ ಸೈಯದ್ ಸದಾತ್ ದರ್ಗಾ ದೇವಸ್ಥಾನಕ್ಕೆ ಬಂದಿದ್ದರು.
ವಾಪಾಸ್ ಹೋಗುವಾಗ ಇಮಾಮ್ ಸಾಬ್ ಅವರ ವಾಹನ ಭದ್ರಾನದಿಯ ಹಳೇ ಭದ್ರಾ ಸೇತುವೆ ಬಳಿ ಊಟಕ್ಕಾಗಿ ವಾಹನ ಪಾರ್ಕ್ ಮಾಡಿದ್ದರು. ಇಮಾ್ ಸಾಬ್ ಅವರಿಗೆ ಇಬ್ಬರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳಿದ್ದಾರೆ. ಗಂಡು ಮಕ್ಕಳಿಬ್ಬರೂ ಭದ್ರಾನದಿಗೆ ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಗಂಡುಮಕ್ಕಳಿಬ್ಬರೂ ನೀರಿನಲ್ಲಿ ಮುಳುಗಿದ್ದನ್ನ ಗಮನಿಸಿದ ಇಮಾಮ್ ಸಾಬ್ ಓರ್ವನನ್ನ ಮೇಲಕ್ಕೆ ಕರೆತಂದಿದ್ದಾರೆ.
ತಕ್ಷಣವೇ ಮತ್ತೋರ್ವ ಮಗನನ್ನ ಹುಡುಕಿದರೂ ಆತ ನೀರಿನಲ್ಲಿ ನಾಪತ್ತೆಯಾಗಿದ್ದನು. ಸ್ವಲ್ಪ ಸಮಯದ ನಙತರ ಮತ್ತೊಬ್ಬ ಮಗ ಪತ್ತೆಯಾದರೂ ಪ್ರಜ್ಞೆಯಿರಲಿಲ್ಲ. ತಕ್ಷಣವೇ ಆತನನ್ನ ಹೊಳೆಹೊನ್ನೂರು ಸನುದಾಯ ಆಸ್ಪತ್ರೆಗೆ ಹೊತ್ತಿಕೊಂಡು ಬಂದಿದ್ದಾರೆ. ವೈದ್ಯರು ಪರೀಕ್ಷಿಸಿ ಆತನ ಸಾವನ್ನ ಕಚಿತ ಪಡಿಸಿದ್ದಾರೆ.
ಮೃತನಾದ ಬಾಲಕನನ್ನ ಮೋಯಿನುದ್ದೀನ್ (16) ಎಂದು ಗುರುತಿಸಲಾಗಿದೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
A boy who had come to Hanagerekatte drowned in the Bhadra River and died
