SUDDILIVE || SHIVAMOGGA
ಹಾವಳಿಯಿಟ್ಟ ಕುಡುಕ-112 ಗೆ ಕರೆ ಮಾಡಿ ಬೇಡಿಕೆಯಿಟ್ಟ ಆಡಿಯೋ ವೈರಲ್-Audio of drunk man calling 112 and demanding help goes viral
ಮದ್ಯವ್ಯಸನಿ ಸಾರ್ವಜನಿಕರೊಂದಿಗೆ ಕುಟುಂಬದವರೊಂದಿಗೆ ಕಿರಿಕ್ ಮಾಡೋದು ಸಹಜ! ಆದರೆ ಇಲ್ಲೊಬ್ಬ ಕುಡುಕ 112 ತುರ್ತು ಕರೆಗೆ ಕರೆ ಮಾಡಿ ಎಣ್ಣೆ ತರಬೇಕು, ಮನೆಗೆ ಹೋಗಬೇಕು ಪೊಲೀಸ್ ಜೀಪ್ ಕಳುಹಿಸಿ ಎಂದು ಕ್ವಾಟಲೆ ಇಟ್ಟಿದ್ದಾನೆ. ಅದರ ಆಡಿಯೋ ವೈರಲ್ ಆಗಿದೆ.
ತುರ್ತು ಸ್ಪಂದನ ಸಹಾಯವಾಣಿ (ಇಆರ್‌ಎಸ್‌ಎಸ್-112)ಗೆ ಮದ್ಯವ್ಯಸನಿಯೊಬ್ಬ ಮದ್ಯ ತರಲು ಹೇಳಿದ್ದಲ್ಲದೆ, ಮನೆಗೆ ಡ್ರಾಪ್ ಮಾಡಲು ಪೊಲೀಸ್ ಜೀಪ್ ಕಳುಹಿಸುವಂತೆ ಕರೆ ಮಾಡಿದ್ದು, ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪೊಲೀಸ್ ಸೇವೆಯನ್ನು ಒದಗಿಸುವ ಇಆರ್‌ಎಸ್‌ಎಸ್-112 ಅನ್ನು ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಆದರೆ 112ಗೆ ಕರೆ ಮಾಡಿದ್ದ ಕಂಠಪೂರ್ತಿ ಕುಡಿದ ವ್ಯಕ್ತಿ ಮನೆಗೆ ಹೋಗಲು ಆಟೋ ಸಿಗುತ್ತಿಲ್ಲ. ಹಾಗಾಗಿ ನಿಮ್ಮ ಪೊಲೀಸ್ ಜೀಪ್ ಅನ್ನು ಕಳುಹಿಸಿ ಎಂದು ದುಂಬಾಲು ಬಿದ್ದಿದ್ದಾನೆ.
ಫೋನ್ ಕರೆ ಸ್ವೀಕರಿಸಿದ್ದ 112 ಸಹಾಯವಾಣಿ ಸಿಬ್ಬಂದಿ ಆತನ ಬೇಡಿಕೆ ಕೇಳಿ ಒಮ್ಮೆ ಹೌಹಾರಿದ್ದಾರೆ. ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಪೊಲೀಸ್ ವಾಹನ ಇದೆ. ನಿಮ್ಮಂಥವರಿಗಲ್ಲ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಆತ, ನಾನೂ ಪಬ್ಲಿಕ್ ಇದೀನಿ. ನೀವು ಪಬ್ಲಿಕ್ ಸರ್ವೆಂಟ್. ಪೊಲೀಸ್ ಇಲಾಖೆ ನನ್ನನ್ನು ಮನೆಗೆ ಬಿಡಬೇಕು. ಜೀಪ್ ಕಳುಹಿಸಿ ಎನ್ನುತ್ತಾನೆ.
ಆಡಿಯೋ ಕೇಳಲು ಈ ಕೆಳಗಿನ ಲಿಂಕ್ ಒತ್ತಿ 👇👇👇👇👇👇👇👇👇👇👇👇👇👇👇👇👇👇👇👇👇https://drive.google.com/file/d/1sBfwi09TIz7hNzhBdeG1whBrMX6liOV8/view?usp=drivesdk
ಇದಕ್ಕೆ 112 ಸಿಬ್ಬಂದಿ ನಂತರ ನಿಮಗೆ ಜೀಪು ಕಳುಹಿಸುವುದಾಗಿ ಹೇಳಿ ಆತನ ವಿಳಾಸ ಕೇಳಿದ್ದಾರೆ. ಎಲ್ಲಿಂದ ಕರೆ ಮಾಡುತ್ತಿದ್ದೀರಿ, ನಿಮ್ಮ ಮಾಹಿತಿ ಕೊಡಿ. ಜೀಪ್ ಕಳುಹಿಸುತ್ತೇವೆ ಎಂದಿದ್ದಾರೆ. ಆಗ ಮದ್ಯವ್ಯಸನಿ ನಾನು, ಶಿವಮೊಗ್ಗ ಗೋಪಾಳದ ಕೊನೇ ಬಸ್ ನಿಲ್ದಾಣದಿಂದ ಕರೆ ಮಾಡುತ್ತಿದ್ದು, ತಕ್ಷಣವೇ ಪೊಲೀಸ್ ವಾಹನ ಕಳುಹಿಸಿ ಎಂದು ಹೇಳಿರುವುದು ಆಡಿಯೋ ವೈರಲ್ ಆಗಿದೆ. ಈ ಘಟನೆ ನಡೆದು ಒಂದು ವಾರ ಕಳೆದಿದ್ದು ಆತನ ಆಡಿಯೋ ಈಗ ವೈರಲ್ ಆಗಿದೆ.
ಆತನನ್ನ 112 ಇಆರ್ ಎಸ್ ವಾಹನ ಆತನನ್ನ ಮನೆಗೆ ಕರೆದುಕೊಂಡು ಹೋಗದೆ ಹತ್ತಿರದ ಪೊಲೀಸ್ ಠಾಣೆಗೆ ಕರೆದಿಯ್ದ ಮೇಲೆ ಆತನಿಗೆ ತನ್ನ ತಪ್ಪು ಅರಿವಾಗಿದೆ.
Audio of drunk man calling 112 and demanding help goes viral
