ಭದ್ರಾವತಿ ಜಂಕ್ಷನ್ ಬಳಿ ಅಪಘಾತ, ಓರ್ವ ಸಾವು ಮತ್ತೋರ್ವನಿಗೆ ಗಾಯ-Accident near Bhadravati Junction, one dead, another injured

SUDDILIVE || SHIVAMOGGA

ಭದ್ರಾವತಿ ಜಂಕ್ಷನ್ ಬಳಿ ಅಪಘಾತ, ಓರ್ವ ಸಾವು ಮತ್ತೋರ್ವನಿಗೆ ಗಾಯ-Accident near Bhadravati Junction, one dead, another injured    

Accident, bhadravathi


ಶಿವಮೊಗ್ಗ ಶಂಕರಘಟ್ಟ ಬಳಿ ಭೀಕರ ಅಪಘಾತ : ಫೋರ್ಡ್ ಕಾರು ಮರಕ್ಕೆ ಡಿಕ್ಕಿ, ಯುವಕನೊರ್ವ ಸಾವಾಗಿದ್ದು ಮತ್ತೊಬ್ಬ ಕಾರು ಚಾಲಾಯಿಸುತ್ತಿದ್ದವನ ಕಾಲು ಮುರಿದಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ಯೂನಿವರ್ಸಿಟಿ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಫೋರ್ಡ್ ಕಾರೊಂದು ವೇಗವಾಗಿ ಬಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಯುವಕನನ್ನ ಶಿವಮೊಗ್ಗದ ವಾದಿ ಏ ಹುದಾ ನಿವಾಸಿ ಸೈಯದ್ ಮನ್ಸೂರ್ ಅವರ ಪುತ್ರ ಸೈಯದ್ ರಿಯಾನ್(18) ಎಂದು ಗುರುತಿಸಲಾಗಿದೆ. ಮತ್ತೋರ್ವ ಕಾರು ಚಲಾಯಿಸುತ್ತಿದ್ದವನ ಕಾಲು ಮುರಿದಿದೆ. ಗಾಯಾಳುವನ್ನು ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಈ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Accident near Bhadravati Junction, one dead, another injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close