SUDDILIVE || SHIVAMOGGA
ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಗಳಿಗೆ 3 ವರ್ಷ ಸಜೆ-Accused of assault with machete sentenced to 3 years in prison
ಹಳೇ ದ್ವೇಶದಿಂದ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ 6 ಆರೋಪಿಗಳಿಗೆ 3 ವರ್ಷ ಸಜೆ ಹಾಗೂ ದಂಡವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿನಾಂಕ: 10/05/2020 ರಂದು ಭದ್ರಾವತಿ ತಾಲ್ಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬುರವರ ಮನೆ ಹಿಂಭಾಗದ ತೆಂಗಿನ ತೋಟದಲ್ಲಿ ಪಿರ್ಯಾದಿ ಕಿರಣ್ (29 ವರ್ಷ) ಮತ್ತು ಮಂಜುನಾಥ್ (25 ವರ್ಷ) ಮತ್ತು ಅರುಣ (24 ವರ್ಷ) ರವರು ನಿಂತಿದ್ದಾಗ, ಮಂಜುನಾಥ್ ರವರಿಗೆ ಎ1 ಅಜೇಯ @ ಅಜ್ಜಿ (24 ವರ್ಷ), ಎ2 ತೇಜು @ ತೇಜಸ್ವಿ @ ಟೀಕು (22 ವರ್ಷ), ಎ3 ಮನು @ ಗೊಣ್ಣೆ ಮಧು @ ಮನೋಜ್ (22 ವರ್ಷ), ಎ4 ಆದರ್ಶ @ ಆದು (25 ವರ್ಷ), ಎ5 ಅರುಣ (20 ವರ್ಷ), ಎ6 ಪಾನಿಪುರಿ ರಂಗ @ ರಂಗ @ ಪಾನಿಪುರಿ(25 ವರ್ಷ) ರವರೆಗಿನ ಆರೋಪಿತರು ಮಂಜುನಾಥ್ ರವರ ಮೇಲಿನ ಹಳೆಯ ದ್ವೇಷದಿಂದ ಕೈಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು, ಅವಾಚ್ಯವಾಗಿ ಬ್ಶೆದು, ದೊಣ್ಣೆಗಳಿಂದ, ಕೈಯಿಂದ, ಮೈಕೈಗೆ ಹೊಡೆದಿದ್ದರು.
ನಂತರ ಎ3 ಮನು ಆರೋಪಿಯು ಮಂಜುನಾಥ್ ರವರನ್ನು ಹಿಡಿದುಕೊಂಡಿದ್ದು, ಅಜೇಯ ಆರೋಪಿಯು ಸಾಯಿಸುವ ಉದ್ದೇಶದಿಂದ ಕಬ್ಬಿಣದ ಮಚ್ಚಿನಿಂದ ಮಂಜುನಾಥ್ ರವರ ಬಲಗೈ, ಮೊಣಕೈ ಹಾಗೂ ಸೊಂಟದ ಎಡಭಾಗಕ್ಕೆ ಬೀಸಿ ಹೊಡೆದು ತೀವ್ರ ಸ್ವರೂಪದ ಗಾಯವಾಗಿದ್ದು, ಈ ಬಗ್ಗೆ ನ್ಯೂ ಟೌನ್ ಪೊಲೀಸ್ ಠಾಣಾ ಗುನ್ನೆ ನಂ 66/2020 ಕಲಂ 143, 144, 147, 148, 504, 323, 324, 307 ಸಹಿತ149 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಕುಬೇರಪ್ಪ ಎ.ಎಸ್.ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:04-05-2026 ರಂದು 1 ಆರೋಪಿತನಿಗೆ 307 ಐಪಿಸಿ ಕಾಯಿದೆಗೆ 7 ವರ್ಷ ಕಠಿಣ ಕಾರಾವಾಸ ಮತ್ತು ಎ1 ರಿಂದ ಎ6 ಆರೋಪಿತರಿಗೆ ಕಲಂ 143, 144, 147, 148, 323, 324 ಐಪಿಸಿ ಕಾಯಿದೆಗೆ 3 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,30,000/- ರೂ ದಂಡವನ್ನು ವಿಧಿಸಿದ್ದು, ನೊಂದವರಾದ ಮಂಜುನಾಥ್ ರವರಿಗೆ 1,50,000/- ರೂ ಪರಿಹಾರ ಕೊಡಲು ಆದೇಶಿಸಿರುತ್ತದೆ.
Accused of assault with machete sentenced to 3 years in prison
