ಬೇಸೂರು ಅಣು ವಿದ್ಯುತ್ ಯೋಜನೆ ಬಗ್ಗೆ ಇತರೆ ಜಿಲ್ಲೆಯವರು ಬೇಡ ಎಂದರೆ ಶಿವಮೊಗ್ಗದ ಡಿಸಿ ಜಾಗವಿದೆ ಎಧಿದ್ದಾರೆ-ರಾಷ್ಟ್ರಭಕ್ತರ ಬಳಗ- People from other districts are saying that there is DC space in Shivamogga if they don't want the Besuru nuclear power project - Rashtrabhaktar Balaga

 SUDDILIVE || SHIVAMOGGA

ಬೇಸೂರು ಅಣು ವಿದ್ಯುತ್ ಯೋಜನೆ ಬಗ್ಗೆ ಇತರೆ ಜಿಲ್ಲೆಯವರು ಬೇಡ ಎಂದರೆ ಶಿವಮೊಗ್ಗದ ಡಿಸಿ ಜಾಗವಿದೆ ಎಧಿದ್ದಾರೆ-ರಾಷ್ಟ್ರಭಕ್ತರ ಬಳಗ- People from other districts are saying that there is DC space in Shivamogga if they don't want the Besuru nuclear power project - Rashtrabhaktar Balaga    

District, saying

ಬೇಸೂರು ಅಣು ವಿದ್ಯುತ್ ಯೋಜನೆಯ ವಿರುದ್ಧ ರಾಷ್ಟ್ರಭಕ್ತರ ಬಳಗ ವಿರೋಧ ವ್ಯಕ್ತಪಡಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಶ್ರೀಕಾಂತ್, NTPC ಸಂಸ್ಥೆ ಸಾಗರ ತಾಲೂಕು ಆವಿನಹಳ್ಳಿಯ ಬೇಸೂರು ಗ್ರಾಮವನ್ನ ಗುರುತಿಸಿ ಕಂದಾಯ ಇಲಾಖೆಗೆ ವರದಿ ನೀಡುವಂತೆ ಸೂಚಿಸಿದೆ. ಅದರಂತೆ ಕೊಪ್ಪಳ, ರಾಯಚೂರು, ವಿಜಯಪುರ, ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ NTPC ಈ ಬಗ್ಗೆ  ಸಭೆ ನಡೆಸಿದೆ ಫೆ.2 ರಂದು ಸಭೆ ನಡೆದಿದೆ ಎಂದರು. 

ವರದಿ ನೀಡಲು ಸರ್ಕಾರದ ಪ್ರಧಾನಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದೆ. ಆವಿನಹಳ್ಳಿ ಹೋಬಳಿ ಬೇಸೂರು ಗ್ರಾಮದಲ್ಲಿ 3190 ಎಕರೆ ಜಮೀನಿದೆ ಎಂದು ಆರ್ ಐ ಅವರು  ಸಾಗರ  ತಹಶೀಲ್ದಾರ್ ಗೆ ಡಿಸಿಗೆ ಪತ್ರ ಬರೆದಿದ್ದಾರೆ. ಸ್ಥಳ ಸೂಕ್ತತೆ ಬಗ್ಗೆ ವರದಿ ನೀಡಲು ಮತ್ತೆ ಸಭೆ ನಡೆದಿದೆ. ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲಾಧಿಕಾರಿಗಳು ತಮ್ಮ ಗ್ರಾಮದಲ್ಲಿ ಬೇಡವೆಂದು ಹೇಳಿದ್ದಾರೆ.  ಉತ್ತರ ಕನ್ನಡದ ಭಾವಿಕೆರೆಯಲ್ಲಿ ಅಲ್ಲಿ ಡಿಸಿ ಸೂಕ್ತವಿಲ್ಲ ಎಂದಿದ್ದಾರೆ. 

ಆದರೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಬೇಸೂರಿನಲ್ಲಿ 3190 ಎಕರೆ ಜಮೀನು ಜಾಗವಿದೆ ಎಂದಿದ್ದಾರೆ. ಅವರಿಗೆ ಬೇಕಾಗಿದ್ದು 2000 ಎಕರೆ ಎಂದಾದರೆ ಅವರು 3190 ಎಕರೆ ಜಾಗವಿದೆ ಎಂದಿದ್ದಾರೆ.  ಪಶ್ಚಿಮಘಟ್ಟದಲ್ಲಿ ಸಾಕಷ್ಟು ಯೋಜನೆಗಳಿವೆ. ಶರಾವತಿ ಪಂಪ್ಡ್ ಸ್ಟೋರೇಜ್  ವಿರುದ್ಧ ಪ್ರತಿಭಟನೆ ನಡೆದಿದೆ. ಇವೆಲ್ಲಾ ನಮ್ಮ ಡಿಸಿಗೆ ಗೊತ್ತಿರಲಿಲ್ಲವಾ ಎಂದು ಪ್ರಶ್ನಿಸಿದರು. 

ಅಮೇರಿಕಾದಲ್ಲಿ ಅಣು ವಿದ್ಯುತ್ ಗಳನ್ನ ಸ್ಥಗಿತಗೊಳಿಸಿದ್ದಾರೆ. ಯೂರೋಪ್ ರಾಷ್ಟ್ರಗಳು ಸೋಲಾರ್ ವಿದ್ಯುತ್ ಬಗ್ಗೆ ಒಲವು ತೋರಿಸುತ್ತಿವೆ. ಕೈಗಾ ಅಣುಸ್ಥಾವರದಲ್ಲಿ 1600 ಮೆಗಾ ವ್ಯಾಟ್ಸ್ ಮಾತ್ರವಾಗಿದೆ. ಆದರೆ  ಕಳೆದ 25 ವರ್ಷದಲಗಲಿ  ಇಲ್ಲಿ ಉತ್ತಪಾದಿಸಿರುವುದು ಕೇವಲ 800 ಮೆಗಾವ್ಯಾಟ್ಸ್ ಆಗಿದೆ. ಬೇಸೂರಿನಲ್ಲಿ ಅಣುಸ್ಥಾವರ ಸ್ಥಾಪನೆಯಾದರೆ ಜನವಸತಿಗೆ ಸನಸ್ಯೆಯಾಗಲಿದೆ ಎಂದರು. 

ಪ್ರಭಾರಿ ಡಿಸಿ ಅವರು NTPC ಗೆ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಬರೊಲ್ಲ ಎಂದು ಹೇಳುತ್ತಾರೆ ಆದರೆ ಸಭೆ ನಡೆದಿರುವುದು ನ್ಯೂಕ್ಲಿಯರ್ ಪವರ್ ಪ್ಲಾಂಟ್ ಗೆ ಜಾಗ ಬೇಕೆಂದಲೇ ಕೇಳಿರುವುದು ಕೈಗಾ ಮತ್ತು ಬೇಸೂರು ಹತ್ತಿರ ಇದ್ದು ಇದು ನ್ಯೂಕ್ಲಿಯರ್ ಪವರ್ ಪ್ಲಾಂಟ್ ಸ್ಥಾಪನೆಗೆ ಸೂಕ್ತವಲ್ಲ. ನ್ಯೂಕ್ಲಿಯರ್ ಪವರ್ ಪ್ಲಾಂಟ್ ವಿದ್ಯುತ್ ಉತ್ಪಾದನೆಗೆ ಸೂಕ್ತವಾದುದ್ದಲಗಲ ಭದ್ರತಾ ವಿಷಯದಲ್ಲಿಯೂ ಸರಿಯಿರುವುದಿಲ್ಲ. ಹಾಗಾಗಿ ಸೋಲಾರ್ ಮತ್ತು ಪವರ್ ಪ್ಲಾಂಟ್ ಸೂಕ್ತವಾಗಿದೆ ಎಂದರು. 

ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ, ಇತರೆ ಜಿಲ್ಲಾಧಿಕಾರಿಗಳು ಒಪ್ಪದೆ ಇದ್ದು ನಮ್ಮ‌ಜಿಲ್ಲಾಧಿಕಾರಿಗಳು ಜಾಗವಿದೆ ಎಂದರೆ ಅರ್ಥವೇನು? ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟವಾದಾಗ ಬಾಯಿ ಮಾತಲ್ಲಿ ಡಿಸಿಗಳು ಜಾಗವಿದೆ ಎಂದು ಹೇಳಿ ಅವಕಾಶ ಕೊಡಲ್ಲ ಎಂದಿದ್ದಾರೆ. ಹೀಗೆ ಡ್ಯೂಯಾಲಿಟಿ ಯಾಕೆ? ಹಾಗಾದರೆ ಸಾಗರ ಸುತ್ತಮುತ್ತ ಫ್ಲೈಟ್ ಯಾಕೆ ಹಾರಾಡುತ್ತಿವೆ ಏಕೆ ಎಂದರು. 

ನಾವು ಡಿಸಿಯವರು ಶಿವಮೊಗ್ಗಕ್ಕೆ ಬಂದಾಗ ಅವರೊಂದಿಗೆ ಸಭೆ ನಡೆಸಲಾಗುವುದು. ಮಿನುಟ್ ಟು ಮಿನುಟ್ ಸಭೆ ನಡೆಸಿ ಉತ್ತರ ಪಡೆದು  NTPC ಗೆ ಮತ್ತೆ ಪತ್ರ ಬರೆಸುವ ಪ್ರಯತಚನ ಮಾಡುತ್ತೇವೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ ಪರಿಸರ ನಾಶಕ್ಕೆ ಬಿಡಲ್ಲ ಎಂದರು‌ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close