ಏ.17 ರಂದು ಅಡ್ಡಪಲ್ಲಕ್ಕಿ ಮಹೋತ್ಸವ, ಬಿಎಸ್ ವೈಗೆ ಕೃತಜ್ಞತಾ ಸಮರ್ಪಣ ಕಾರ್ಯಕ್ರಮ-Addapallakki Mahotsava on April 17, thanksgiving dedication program to BSY

 SUDDILIVE || SHIVAMOGGA

ಏ.17 ರಂದು ಅಡ್ಡಪಲ್ಲಕ್ಕಿ ಮಹೋತ್ಸವ, ಬಿಎಸ್ ವೈಗೆ ಕೃತಜ್ಞತಾ ಸಮರ್ಪಣ ಕಾರ್ಯಕ್ರಮ-Addapallakki Mahotsava on April 17, thanksgiving dedication program to BSY   

Addapallakki, mahotsava




ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿಯ ವತಿಂದ ಪಂಚಪೀಠ ಮಹೋತ್ಸವ, ಬೃಹತ್ ಧರ್ಮಜಾಗೃತಿ ಸಮಾವೇಶ ಮತ್ತು ಕೃತಜ್ಞತಾ ಸಮರ್ಪಣಾ ಸಮಾರಂಭವನ್ನ ಮೇ.17 ರಂದು ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಆಯನೂರು ಮಂಜುನಾಥ ಅವರು, ಆಂಧ್ರದ ಶ್ರೀಶೈಲ ಕೇದಾರ ಪೀಠ, ಕಾಶಿ ಪೀಠ, ಉಜ್ಜನೀಪೀಠ ಮತ್ತು ರಂಭಾಪುರಿ ಪೀಠಗಳನ್ನ ಸೇರಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುವುದು. ಈ ಹಿನ್ನಲೆಯಲ್ಲಿ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ  ಎಂದರು. 

34 ವರ್ಷಗಳ ಹಿಂದೆ ಕಾರ್ಯಕ್ರಮ ನಡೆದಿತ್ತು. ಎಲ್ಲಾ ಈಠಾಧೀಶ್ವರರನ್ನ ಸ್ವಾಗತಿಸಿ ಮೇ.17 ರಂದು ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದಿಂದ ಅಡ್ಡಪಲ್ಲಕ್ಕಿ ಉತ್ಸವ ಆರಂಭವಾಗಲಿದೆ. ಫ್ರೀಡಂಪಾರ್ಕ್ ಗೆ ಈ ಅಡ್ಡಪಲ್ಲಕ್ಕಿ ಮೆರವಣಿಗೆ ತಲುಪಲಿದೆ. ಇದೇ ವೇಳೆ ಚುನಾವಣ ರಾಜಕಾರಣಕಕ್ಕೆ ಬಂದು 50 ವರ್ಷ ಪೂರೈಸಿದ್ದರಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಕೃತಜ್ಞತಾ ಸಮಾರಂಭ ನಡೆಯಲಿದೆ. 

ಈ ಎರಡೂ ಕಾರ್ಯಕ್ರಮ ಅಪರೂಪವಾಗಿದ್ದರಿಂದ ಸಮಾಜ ಬಾಂಧವರು ಮಾತ್ರವಲ್ಲ ಎಲ್ಲಾ ನಾಗರೀಕರು ಭಾಗಿಯಾಗಲು ಕೋರಿದರು. ಅಡ್ಡಪಲ್ಲಕ್ಕಿ ಉತ್ಸವ ಪದೇ ಪದೇ ನಡೆಯಲ್ಲ. ಯಡಿಯೂರಪ್ಪನವರಿಗೆ ಕೃತಜ್ಞತಾ ಸಮಾರಂಭ ನಡೆಯೊಲ್ಲ. ಚಿತ್ರದುರ್ಗದಲ್ಲಿ ಬಿಎಸ್ ವೈಗೆ ಅಭಿನಂದನಾ ಸಮಾರಂಭ ನಡೆದಿದೆ ಬಿಸಿಲು ಹೆಚ್ಚಾಗಿದ್ದರಿಂದ ಜನರ ನಿರೀಕ್ಷೆಯ ಬಗ್ಗೆ ನಿಖರವಾಗಿ ಹೇಳಲಾಗದು ಎಂದರು. 

ಸುದ್ದಿಗೋಷ್ಠಿಯಲ್ಲಿ ಎಂಎಲ್ ಸಿ ಡಾ.ಧನಂಜಯ ಸರ್ಜಿ,  ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಬಸವೇಶ್ವರ ಸಹಕಾರ ಸಂಘದ ಸಂತೋಷ್ ಬಳ್ಳಕೆರೆ, ಮಾಜಿ ಎಂಎಲ್ ಸಿ ರುದ್ರೇಗೌಡ ಮೊದಲಾದವರು ಉಪಸ್ಥಿತರಿದ್ದರು. 

https://www.suddilive.in/2026/05/Woman-injured-after-being-hit-while-crossing-road.html

Addapallakki Mahotsava on April 17, thanksgiving dedication program to BSY 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close