ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘಕ್ಕೆ ಶತಮಾನದ ಸಂಭ್ರಮ- Sri Basaveshwaraswamy Town Pattana Cooperative Society celebrates its centenary

 SUDDILIVE || SHIVAMOGGA

ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘಕ್ಕೆ ಶತಮಾನದ ಸಂಭ್ರಮ- Sri Basaveshwaraswamy Town Pattana Cooperative Society celebrates its centenary   

Basaveswara, swamy


ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ1925 ರಿಂದ ನಗರದಲ್ಲಿ ಆರಂಭವಾಗಿತ್ತು.  ಆಗ ಷೇರು ಧನ 1150 ರೂ.ವಿನಿಂದ ಆರಂಭವಾದ ಷೇರು ಬಂಡವಾಳ 1945-46 ರಲ್ಲಿ 8012 ರಲ್ಲಿ ಬಂಡವಾಳ ಕ್ರೂಢಿಕೃತವಾಗಿತ್ತು ಎಂದು ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಬಳ್ಳೇಕೆರೆ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26 ನೇ ಸಾಲಿಗೆ 13 ಕೋಟಿ ರೂ. ಠೇವಣಿ ಸಂಗ್ರಹವಾಗಿತ್ತು. 7.80 ಕೋಟಿ ರೂ.ಗಳನ್ನ ವಿವಿಧ ಸಾಲವಾಗಿ ನೀಡಲಾಗಿದ್ದು 24 ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿದ್ದು, ಒಟ್ಟು ವಹಿವಾಟು 50 ಕೋಟಿ ದಾಟಿದೆ. ನಿವ್ವಳ ಲಾಭ 50.70 ಲಕ್ಷರೂ ಲಾಭಗಳಿಸಲಾಗಿದೆ ಎಂದರು. 

ಜಿಲ್ಲಾ ಮಟ್ಟದಲ್ಲಿ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿ ಲಭಿಸಿದೆ. 100 ವರ್ಷಗಳ ಪೂರೈಕೆಯ ಹಿನ್ನಲೆಯಲ್ಲಿ ಮೇ 16 ರಂದು ಕುವೆಂಪು ರಂಗ ಮಂದಿರದಲ್ಲಿ ಸಂಘದ ಅಧ್ಯಕ್ಷ ನನ್ನ ಅಧ್ಯಕ್ಷತೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ‌ನಡೆಯಲಿದೆ. ಕಾರ್ಯಕ್ರಮವನ್ನ ರಾಜಕೀಯ ಜನಪ್ರತಿನಿಧಿಗಳು ಹಾಗೂ ಪೂಜ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದರು. 

ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಎಡೆಯೂರ ಬಾಳೆಹೊನ್ನೂರುಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ, ಬಿಳಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ, ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ, ತೊಗರ್ಸಿಯ ಚನ್ನವೀರ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಾವರೆಕೆರೆಯ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಯವರ ಸಮ್ಮುಖದಲ್ಲಿ ನಡೆಯಲಿದ್ದು 

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಂದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಸಂಸದ ರಾಘವೇಂದ್ರ ಮತ್ತು ಶಾಸಕ ಜಿ.ಟಿದೇವೇಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಚನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಆಯನೂರು ಮಂಜುನಾಥ, ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಸಿ.ಎಸ್ ಷಡಾಕ್ಷರಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಎಂಎಡಿಬಿ ಅಧ್ಯಕ್ಷ ಮಂಜುನಾಥ ಗೌಡ,  ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಸ್ ಪಿ ದಿನೇಶ್, ಮೊದಲಾದವರು ಭಾಗಿಯಾಗಲಿದ್ದಾರೆ. ಎಲ್ಲಾ ಸಂಘದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಗುವುದು ಎಂದರು. 

https://www.suddilive.in/2026/05/Addapallakki-Mahotsava-on-April-17-thanks-giving-dedication-program-to-BSY.html

Sri Basaveshwaraswamy Town Pattana Cooperative Society celebrates its centenary

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close