SUDDILIVE || SHIVAMOGGA
ಕೋಕಾ ಕಾಯ್ದೆ ಅಡಿ ಆದಿಲ್ ಬಂಧನ, ಯಾವ ಪ್ರಕರಣದಲ್ಲಿ?Adil arrested under the Coca Act, in which case?
ಜಯನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದ್ದ ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಕೋಕಾ ಕಾಯ್ದೆ ಅಡಿ ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಆರೋಪಿ ಆದಿಲ್ ಮತ್ತೋರ್ವನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ 2025 ರಲ್ಲಿ ಗನಿ ಅಹಮದ್ ಖಾನ್(19) ಎಂಬಾತ ತನ್ನ ತಂದೆ ಅಪಘಾತದಲ್ಲಿ ಮರಣಹೊಂದಿದ ಪ್ರಕರಣದಲ್ಲಿ ಸಹಿ ಮಾಡಲೆಂದು ಶಿವಮೊಗ್ಗದ ನ್ಯಾಯಾಲಯಕ್ಕೆ ಬಂದಿದ್ದ. ಬೆಳಿಗ್ಗೆ ವಿಚಾರಣೆ ನಡೆದು ಮಧ್ಯಾಹ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಿ ಮಾಡಲು ಆರ್ ಟಿ ಒಕಚೇರಿ ಬಳಿ ಸ್ನೇಹಿತ ಪ್ರಸನ್ನನಿಗಾಗಿ ಕಾಯುತ್ತಿದ್ದ ವೇಳೆ ಶೋಯೆಬ್ ಯಾನೆ ಅಂಡ ಪ್ರಸನ್ನನ ಹೆಗಲ ಮೇಲೆ ಕೈಹಾಕಿಕೊಂಡು ಒಂದು ಕಡೆ ಕರೆದುಕೊಂಡು ಹೋಗಿ ಮೊಬೈಲ್ ನೋಡಿದ್ದಾನೆ.
ನಂತರ ಗನಿಯನ್ನ ಅಪ್ರು ಯಾನೆ ಸಮೀರ್, ಆದಿಲ್, ಸಲ್ಮಾನ್ ಯಾನೆ ಅಡ್ಡು ಪ್ರತಾಪ್ ಸೇರಿ 8-10 ಜನಪ್ರಸನ್ನ ಇದ್ದ ಕಡೆ ಕರೆದುಕೊಂಡು ಹೋಗಿ ನಂತರ ಕೋರ್ಟ್ ನಿಂದ ಉರ್ದು ಬಜಾರ್ ನ ಮನೆಯೊಂದರಲ್ಲಿ ಕೂಡಿ ಹಾಕಿ ಇಬ್ಬರ ಮೊಬೈಲ್ ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಯಾಸಿನ್ ಖುರೇಶಿ ಮತ್ತು ಸಹೋದರ ಶಾಹೀದ್ ಖುರೇಷಿಯ ಫೋಟೊ ಇಟ್ಟುಕೊಂಡ ಹಿನ್ನಲೆಯಲ್ಲಿ ಇಬ್ಬರನ್ನ ಚೆನ್ನಾಗಿ ಥಳಿಸಿದ್ದಾರೆ. ಮತ್ತೊಮ್ಮೆ ಖುರೇಷಿ ಸಹೋದರರ ಬಗ್ಗೆ ಫೊಟೊ ಇಟ್ಟುಕೊಂಡು ಸ್ಟೇಟಸ್ ಹಾಕಿಕೊಂಡರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಧಮ್ಕಿ ಹಾಕಿದ ಪ್ರಕರಣದಲ್ಲಿ 10 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದಿಲ್ ಮತ್ತು ಇತರರ ವಿರುದ್ಧ ಕೋಕಾ ಕಾಯ್ದೆ ಲಾಗೂ ಮಾಡಲಾಗಿತ್ತು.
ಈ ಪ್ರಕರಣದಲ್ಲಿ 8 ಜನ ಪತ್ತೆಯಾದರೂ ಆದಿಲ್ ಮತ್ತು ಪ್ರತಾಪ್ ತಪ್ಪಿಸಿಕೊಂಡಿದ್ದರು. ಮೊನ್ನೆ ಇಬ್ವರನ್ನೂ ಬಂಧಿಸಿ ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿ ತಾತ್ಕಾಲಿಕವಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕಿರಿಸಲಾಗಿದೆ.
2023 ರಲ್ಲಿ ಯಾಸಿನ್ ಖುರೇಶಿ ಮರ್ಡರ್ ಪ್ರಕರಣದಲ್ಲಿ ಆದಿಲ್ ಗೆ ಜಾಮೀನಾಗಿತ್ತು. ಆದರೆ 2025 ರಂದು ನಡೆದ ಅಪಹರಣ, ಧಮ್ಕಿ ಬೆದರಿಕೆ ಪ್ರಕರಣದಲ್ಲಿ ಆದಿಲ್ ನನ್ನ ಕೋಕಾ ಕಾಯ್ದೆ ಅಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆದರೆ ಇದೇ ತಿಂಗಳು 11 ನೇ ತಾರೀಕಿನಂದು ಆದಿಲ್ ಮೊಬೈಲ್ ಅಂಗಡಿಯ ಇರ್ಫಾನ್ ಎಂಬಾತನನ್ನ ಅಪಹರಿಸಿ ಹಣದ ಬೇಡಿಕೆಯಿಟ್ಟಿದ್ದ, ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿತ್ತು. ಅದು ಇನ್ನೂ ಬಾಕಿ ಉಳಿದಿದೆ.
Adil arrested under the Coca Act, in which case?

