SUDDILIVE || SHIVAMOGGA
ಎರಡು ದಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-Power outages in various areas for two days
ಮೇ.19 ಮತ್ತು 20 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗ ನಗರ ಎಂ.ಆರ್.ಎಸ್. 110/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಈ ವಿ.ವಿ ಕೇಂದ್ರದ ವ್ಯಾಪ್ತಿಯ ಬೆಕ್ಕಿನ ಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ. ರಸ್ತೆ, ಒ.ಬಿ.ಎಲ್.ರಸ್ತೆ, ಪೆನ್ಷನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಕಪ್ಪನ ಕೇರಿ, ನಾಗಪ್ಪನ ಕೇರಿ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಎಡಭಾಗ, ಅಮಿರ್ ಅಹಮ್ಮದರ್ ವೃತ್ತ, ಶಿವಾಜಿ ರಸ್ತೆ, ತಿರುಪಳಯ್ಯನ ಕೇರಿ. ಬಿ.ಹೆಚ್.ರಸ್ತೆ, ಸಾರ್ವಕರ್ ನಗರ, ಅಶೋಕರಸ್ತೆ, ಕುಚಲಕ್ಕಿ ಕೇರಿ, ಎಂ.ಕೆಕೆ.ರಸ್ತೆ, ಅನವೇರಪ್ಪನ ಕೇರಿ. ಎಲೆ ರೇವಣ್ಣನ ಕೇರಿ. ಗಂಗಾ ಪರಮೇಶ್ವರಿ ದೇವಸ್ಥಾನ ರಸ್ತೆ, ಧರ್ಮರಾಯನ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮೇ.20 ರಂದು ವಿದ್ಯುತ್ ವ್ಯತ್ಯಯ
220 ಕೆವಿ ಎಂ.ಆರ್.ಎಸ್ ಮುಖ್ಯ ಸ್ವೀಕರಣಾ ಕೇಂದ್ರದಲ್ಲಿ 66 ಕೆವಿ ಡಿವಿಜಿ-01 ಬಸ್ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ತಾವರೆಚಟ್ನಹಳ್ಳಿ ವಿ.ವಿ ಕೇಂದ್ರದಿಂದ ವಿದ್ಯುತ್ ವ್ಯತ್ಯಯವಾಗಲಿದೆ. ಸರಬರಾಜಾಗುವ ಪ್ರಮುಖ ಪ್ರದೇಶಗಳಲ್ಲಿ ಮೇ 20 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಶಿವಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್ ಬಿ ಎಸ್ ನಗರ, ಅಶ್ವತ್ಥ್ ನಗರ, ಕೀರ್ತಿ ನಗರ, ದೇವಂಗಿ 01 ನೇ ಹಂತ, ಬಸವೇಶ್ವರ ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ. ಕೃಷಿ ನಗರ 01 ನೇ ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್‌ಮೆಂಟ್.
ಶಾಂತಿನಗರ ರಾಗಿಗುಡ್ಡ, ಪಾಪ್ಯುಲರ್ ರೈಸ್ ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್ ಮಿಲ್, ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ, ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outages in various areas for two days

