ಮೇ.17 ರಂದು ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ- All preparations underway for the Addapallakki Utsav and felicitation program for Yediyurappa to be held on May 17

 SUDDILIVE || SHIVAMOGGA

ಮೇ.17 ರಂದು ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ-  All preparations underway for the Addapallakki Utsav and felicitation program for Yediyurappa to be held on May 17   

Addapallakki, utsava

ನಗರದಲ್ಲಿ ಮೂವತ್ತೆರಡು ವರ್ಷಗಳ ನಂತರ ಮೇ 17ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಜಾಗೃತಿ ಸಭೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭದ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಸವ ಸಮಾಜದ ಮುಖಂಡ ರುದ್ರಮುನಿ, ಬಸವೇಶ್ವರ ಸಮಾಜಕ್ಕೆ 100 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವದ ನಿಮಿತ್ತ ಅಲ್ಲಮಪ್ರಭು ಮೈದಾನದಲ್ಲಿ  ಸಭಾಮಂಟಪ, ಮುಖ್ಯ ವೇದಿಕೆ, ದಾಸೋಹ ಭವನ ಸೇರಿ ಭಕ್ತರಿಗೆ ಅಗತ್ಯವಿರುವ ವಿವಿಧ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯಕ್ಕೆ ಭಾನುವಾರ ಗುದ್ದಲಿ ಪೂಜೆ ನಡೆದಿದೆ. 

ಗುದ್ದಲಿ ಪೂಜೆ ಭದ್ರಾವತಿ ಬಿಳಕಿ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಮಳಲಿ ಮಠದ ಶ್ರೀ ಡಾ. ನಾಗಭೂಷಣ ಸ್ವಾಮೀಜಿ ಸಾನ್ನಿಧ್ಯದಲ್ಲಿ  ಚಾಲನೆ ದೊರಕಿದೆ. ಮುಂದಿನ ಪೀಳಿಗೆ ಮತ್ತು ಇಂದಿನ ಸಮಾಜಕ್ಕೆ ಧರ್ಮ ಎಲ್ಲಿಗೆ ತಲುಪಿದೆ ಎಂಬುದು ತಿಳಿಸಬೇಕಿದೆ. 50 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು. 


ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಸಮಿತಿ ಈಗಾಗಲೇ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಮೂಲ ಸೌಕರ್ಯ, ದಾಸೋಹ ವ್ಯವಸ್ಥೆ, ವಾಹನ ನಿಲುಗಡೆ, ಕುಡಿಯುವ ನೀರು ಹಾಗೂ ಭಕ್ತರ ಸೌಲಭ್ಯಗಳಿಗೆ ವಿಶೇಷ ಆದ್ಯತೆ ಬಗ್ಗೆ ಸಮಿತಿ ಪದಾಧಿಕಾರಿಗಳು ಚರ್ಚಿಸಿದೆ ಎಂದರು. 


ಎಸ್ಪಿ ದಿನೇಶ್ ಮಾತು 


ಎಸ್ ಪಿ ದಿನೇಶ್ ಮಾತನಾಡಿ, ಮೇ.17 ರಂದು ಅಡ್ಡಪಲ್ಲಕಿ ಉತ್ಸವ ನಡೆಯಲಿದೆ. 50 ಸಂಘಟನೆಗಳು ಸೇರಿ ನಡೆಸಲಾಗುತ್ತಿದೆ. ಜಿಲ್ಲೆ ರಾಜ್ಯಕ್ಕೆ ನಾಲ್ಕು ಸಿಎಂ ನ್ನ ನೋಡಿದೆ. ನಾಲ್ಕು ಸಿಎಂಗಳಲ್ಲಿ ಬಿಎಸ್ ವೈ ಅವರ ಸಾಧನೆಗೆ ಮತ್ತು  ಸುಧೀರ್ಘ ರಾಜಕೀಯ ಜೀವನಕ್ಕೆ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.  ಅಡ್ಡಪಲ್ಲಿಕ್ಕಿ ಉತ್ಸವವನ್ನ ಮೇ.17 ರಂದು ಮಧ್ಯಾಹ್ನ 3 ಗಂಟೆಗೆ ಗಾಂಧಿ ಬಜಾರ್ ನ ಬಸವ ದೇವಸ್ಥಾನದಿಂದ ಫ್ರೀಡಂ ಪಾರ್ಕ್ ನ ವರೆಗೆ ನಡೆಯಲಿದೆ ಎಂದರು.   

ಸುದ್ದಿಗೋಷ್ಠಿಯಲ್ಲಿ ಬಸವ ಸಮಾಜದ ಬಳ್ಳೇಕೆರೆ ಸಂತೋಷ್, ರಾಜು, ಬೆನಕಪ್ಪ ಮೊದಲಾದವರು ಭಾಗಿಯಾಗಿದ್ದರು. 

All preparations underway for the Addapallakki Utsav and felicitation program for Yediyurappa to be held on May 17

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close