SUDDILIVE || SHIVAMOGGA
ಶಾಲಾ ಕಾಲೇಜು ಆರಂಭದ ಮೊದಲನೇ ದಿನವೇ ಕೇಸರಿ ಶಾಲು ಧರಿಸಿ ಬರಲು ಬಜರಂಗ ದಳ ಕರೆ-Bajrang Dal calls for wearing saffron shawls on the first day of school and college
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಕಲ್ಪಿಸಿ ಕೇಸರಿ ಶಾಲು, ಪೇಟವನ್ನ ನಿಷೇಧಿಸಿ ಆದೇಶಿಸಿದ ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಮತ್ತು ಅದರ ಅಂಗ ಸಂಸ್ಥೆಗಳು ವಿಶೇಷ ಹೋರಾಟಕ್ಕೆ ಕರೆ ನೀಡಿದೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆಶಯಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಹಿಜಾಬ್ ಪ್ರೇಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಯುವಶಕ್ತಿ ಬೀದಿಗಿಳಿದು ಹೋರಾಡಲಿದೆ ಎಂದು ಬಜರಂಗ ದಳದ ರಾಜೇಶ್ ಗೌಡ ಕರೆ ನೀಡಿದ್ದಾರೆ.
ಯುವಶಕ್ತಿಯ ಹೋರಾಟಕ್ಕೆ ಶಿವಮೊಗ್ಗ ಬಜರಂಗದಳ ಬೆಂಬಲಸೂಚಿಸಿದೆ. ವಿಶೇಷ ಹೋರಾಟವೇನೆಂದರೆ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಬೇಸಿಗೆ ಶಾಲೆ ಮುಗಿಸಿ ಆರಂಭಗೊಳ್ಳುತ್ತಿರುವ ಮೊದಲನೇ ದಿನ ಕೇಸರಿ ಶಾಲನ್ನ ಹಾಕಿಕೊಂಡು ಬರುವಂತೆ ರಾಜೇಶ್ ಗೌಡ ಕರೆ ನೀಡಿದ್ದಾರೆ.
ಶಾಲ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಕಲ್ಪಿಸಿ, ಕೇಸರಿ ಶಾಲು ಪೇಟಗೆ ನಿಷೇಧಿಸಿದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಈ ಕರೆ ಶಿಕ್ಷಣ ಇಲಾಖೆಗೆ ತಲೆನೋವಾಗುವ ಸಾಧ್ಯತೆಯಿದೆ. ಹಿಜಾಬ್ ನಿಷೇಧಿಸಿದ ವೇಳೆ ಉಂಟಾದ ಪ್ರತಿಭಟನೆ ಬುಗಿಲೆದ್ದಿತ್ತು. ಆ ದೃಶ್ಯಾವಳಿ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಿದೆ.
Bajrang Dal calls for wearing saffron shawls on the first day of school and college
