ರಸ್ತೆ ಒತ್ತುವರಿ ತೆರವು ಮಾಡುವಂತೆ ಡಿಎಸ್ಎಸ್ ಅಂಬೇಡ್ಕರ್ ವಾದದಿಂದ ಅಹೋರಾತ್ರಿ ಪ್ರತಿಭಟನೆ- DSS Ambedkar's demand for road clearance sparks overnight protest

SUDDILIVE || SHIVAMOGGA

ರಸ್ತೆ ಒತ್ತುವರಿ ತೆರವು ಮಾಡುವಂತೆ ಡಿಎಸ್ಎಸ್ ಅಂಬೇಡ್ಕರ್ ವಾದದಿಂದ ಅಹೋರಾತ್ರಿ ಪ್ರತಿಭಟನೆ- DSS Ambedkar's demand for road clearance sparks overnight protest    

Dss, protest


ಮೇಲ್ವರ್ಗದ ಭೂ ಒತ್ತುವರಿದಾರರ ಜೊತೆ ಶಾಮೀಲಾಗಿ ನ್ಯಾಯಾಲಯದ ಆದೇಶದಂತೆ ಒತ್ತುವರಿ ತೆರವುಗೊಳಿಸದೆ ಪರಿಶಿಷ್ಟ ಜಾತಿ ಏಕೆ ಕಾಲೋನಿಗೆ ಓಡಾಡಲು ರಸ್ತೆ ಮಾಡಿಸಿಕೊಡದ ಕರ್ತವ್ಯ ಲೋಪವೇಶಗಿರುವ ಅರಬಿಳಿಚಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಭದ್ರಾವತಿ ತಾಲೂಕು ಇ ಓ ರವರನ್ನು ತಕ್ಷಣವೇ ಅಮಾನತ್ತು ಗೊಳಿಸಿ ಒತ್ತುವರಿತರು ಗಳಿಸಬೇಕೆಂದು ಆಗ್ರಹಿಸಿ ಇಂದು ದಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹೆಚ್ ಎಸ್ ಆಲೇಶಪ್ಪನವರ ನೇತೃತ್ವದಲ್ಲಿ ಡಿಸಿ ಕಚೇರಿ ಮುಂದೆ ಹಹೋ ರಾತ್ರಿ ಧರಣಿಗೆ ಮುಂದಾಗಿದೆ.

ಅರೆಬಿಳುಚಿ ಗ್ರಾಮದಲ್ಲಿ 133 ದಿನಗಳಿಂದ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗದ ಬೀದಿಯಲ್ಲಿ ವಾಸವಾಗಿರುವ ಜನಾಂಗದ ಮೂರು ಬೀದಿಗಳಿದ್ದು ಸುಮಾರು 60 ಮನೆಗಳಿವೆ ಎರಡು ಬೀದಿಗಳಿಗೆ ಓಡಾಡಲು ರಸ್ತೆ ಇದ್ದರೂ ಸಹ ಮೂರನೇ ಬೀದಿಯಲ್ಲಿ ಸುಮಾರು 19 ಮನೆಗಳಿದ್ದು ಇವರುಗಳ ನಿವೇಶನ ಪಂಚಾಯಿತಿ ದಾಖಲೆಯಲ್ಲಿ 25×75 ಆಡಿ ದಾಖಲೆಯಲ್ಲಿದೆ ಅಷ್ಟೆ, ಚೆಕ್ ಬಂದಿಯಲ್ಲಿ ಉತ್ತರಕ್ಕೆ ಪರಿಶಿಷ್ಟ ಜಾತಿ ಕೇರಿಗೆ ಓಡಾಡುವ ರಸ್ತೆ ಎಂದು ದಾಖಲಾಗಿದೆ ಇದರ ಹಿಂಬದಿಯಲ್ಲಿ ವಾಸವಾಗಿರುವ ಮರಾಠ ಮಡಿವಾಳ ಮುಸ್ಲಿಮ್ಸ್ ಜನಾಂಗದವರು ವಾಸವಾಗಿರುವ ಮೇಲ್ವರ್ಗದವರ ನಿವೇಶನಗಳಿದ್ದು, ಅವರ ಮನೆಗಳ ಅಳತೆಯು ಅಗಲ 25 ಇದ್ದರೆ ಉದ್ದ 90, 80, 124 ಎಂದು ನಮೂದಾಗಿದೆ.

ಇವರೆಲ್ಲರೂ ಪರಿಷ್ಟ ಜಾತಿ ಅವರ ಮನೆಗೆ ಹೋಗುವ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿರುವುದಾಗಿ ಸಂಘಟನೆ ಆರೋಪಿಸಿ ಅರೆಬೆಳಕಿ ಗ್ರಾಮ ಪಂಚಾಯತಿ ಎದುರು ಇಷ್ಟು ದಿನ ಪ್ರತಿಭಟನೆ ನಡೆಸುತ್ತಿದ್ದರು. 133 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಯಾವ ಅಧಿಕಾರಿಗಳಿಂದ ನ್ಯಾಯವು ದೊರೆಯದ ಹಿನ್ನೆಲೆಯಲ್ಲಿ ಇಂದು ಸಂಘಟನೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿಗೆ ಮುಂದಾಗಿದೆ.

DSS Ambedkar's demand for road clearance sparks overnight protest 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close