SUDDILIVE || BHADRAVATHI
ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ- Boy who went missing four days ago found dead in decomposed state
ನಾಲ್ಕು ದಿನಗಳ ಹಿಂದೆ ಅಜ್ಜಿ ಹತ್ತಿರ 200 ರೂ. ಹಣ ಪಡೆದು ಹೋಗಿದ್ದ 13 ವರ್ಷ 11 ತಿಂಗಳ ಬಾಲಕ ಶವವಾಗಿ ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದ್ದಾನೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಬಾಲಕನ ಸಾವು ಕುತೂಹಲ ಮತ್ತು ಹಲವು ಅನುಮಾನಗಳನ್ನ ಹುಟ್ಟಿಹಾಕಿದೆ.
ಭದ್ರಾವತಿಯ ಜಿಂಕ್ ಲೈನ್ ನಲ್ಲಿ ತಾಯಿ ಪ್ರಮೀಳರೊಂದಿಗೆ ವಾಸವಾಗಿದ್ದ 13 ವರ್ಷ 11 ತಿಂಗಳಿನ ಬಾಲಕ ಚೇತನ್ ಕುಮಾರ್, 8 ನೇ ತರಗತಿ ಪಾಸ್ ಆಗಿ 9 ನೇ ತರಗತಿಗೆ ತೇರ್ಗಡೆಯಾಗಿದ್ದ. ತೇರ್ಗಡೆಯಾದ ಮಗ ಮೇ.8 ರಂದು ಶಿವರಾಮ್ ಬಡಾವಣೆಯಲ್ಲಿರುವ ತಾಯಿ ಮನೆಗೆ ಮಗನನ್ನ ಬಿಟ್ಟು ಫ್ಯಾಕ್ಟರಿ ಕೆಲಸಕ್ಕೆ ತೆರಳಿದ್ದರು.
ಅಂದು ಮಧ್ಯಾಹ್ನ 2 ಗಂಟೆಗೆ ಅಜ್ಜಿ ಬಳಿ ಖರ್ಚಿಗೆ ಹಣವಿಲ್ಲ 200 ರೂ. ಕೊಡು ಎಂದು ಹೇಳಿ ಹೋದ ಚೇತನ್ ಕುಮಾರ್ ಮನೆಗೆ ವಾಪಾಸ್ ಆಗಿರಲಿಲ್ಲ. ಫ್ಯಾಕ್ಟರಿ ಕೆಲಸ ಮುಗಿಸಿಕೊಂಡು ತಾಯಿ ಮನೆಗೆ ಹೋದ ಪ್ರಮೀಳರಿಗೆ ಶಾಕ್ ಆಗಿದೆ. ತಕ್ಷಣವೇ ಎಲ್ಲಕಡೆ ಹುಡುಕಿದರೂ ಮಗ ಪತ್ತೆಯಾಗಿರಲಿಲ್ಲ ಮೇ.9 ರಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇಂದು ಮಾಚೇನಹಳ್ಳಿ ಕೈಕಾರಿಕಾ ಪ್ರದೇಶದಲ್ಲಿರುವ ವಿಜಯ ಟೆಕ್ನೋ ಬಳಿ ಚೇತನ್ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಆತನ ಶವ ಪತ್ತೆಯಾಗಿದ್ದು ಸುಕೋ ತಂಡ ಸ್ಥಳಕ್ಕೆ ಧಾವಿಸಿದೆ. ಬಾಲಕನನ್ನ ಕೊಲೆ ಮಾಡಲಾಗಿದೆಯಾ ಅಥವಾ ಆತ್ಮಹತ್ಯೆನಾ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
Boy who went missing four days ago found dead in decomposed state
