SUDDILIVE || SHIVAMOGGA
ಯುವಕನನ್ನ ಅಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆದಿಲ್ ಮತ್ತಿರರ ವಿರುದ್ಧ ದೂರು- Complaint filed against Adil Mathira for abducting a young man and demanding money
ಯುವಕನೋರ್ವನನ್ನಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಯಾಸೀನ್ ಖುರೇಶಿ ಹತ್ಯೆಯ ಪ್ರಮುಖ ಆರೋಪಿ ಆದಿಲ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾನೆ.
ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಇರ್ಫಾನ್ ಖಾನ್ ಎಂಬಾತನನ್ನು ಅಪಹರಿಸಿ, ಬೆದರಿಸಿ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎಂದು ದಾಖಲಾದ ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ.
ಇರ್ಫಾನ್ ಖಾನ್ ನ್ಯೂ ಮಂಂಡ್ಲಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಕಲಿಯುತ್ತಿರುವ ಯುವಕ. ಮೇ 9ರಂದು ಮಧ್ಯಾಹ್ನ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಆದಿಲ್ ಭಾಯ್ ಕರೆಯುತ್ತಿದ್ದಾರೆ ಎಂದು ಹೇಳಿ ಇರ್ಫಾನ್‌ನನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಬೈಪಾಸ್ನಿಂದ ಕಿಯಾ ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಂಧನದಲ್ಲಿರಿಸಿದ್ದಾರೆ.
ನಂತರ ಸ್ಥಳಕ್ಕೆ ಫಾರ್ಚೂನರ್ ಕಾರಿನಲ್ಲಿ ಬಂದ ಆರೋಪಿ ಆದಿಲ್, ಇರ್ಫಾನ್‌ನನ್ನು ತರೀಕೆರೆ ರಸ್ತೆಗೆ ಕರೆದೊಯ್ದು ಮಾರಕಾಸ್ತ್ರ ತೋರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ನಿನ್ನ ಬಗ್ಗೆ ನನಗೆಲ್ಲಾ ಗೊತ್ತು, ಹಣ ಕೊಡದಿದ್ದರೆ ನಿನ್ನ ಹೆಣ ಬೀಳಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೆ, ಆದಿಲ್ ಸಹಚರರು ಇರ್ಫಾನ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದು, ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Complaint filed against Adil Mathira for abducting a young man and demanding money
