SUDDILIVE || SAGARA
ಬಿಳಿಸಿರೆ ಗ್ರಾಮದಲ್ಲಿ ಬಹಿಷ್ಕಾರದ ಕೂಗು, ತಹಶೀಲ್ದಾರ್ ಪ್ರದೀಪ್ ನಿಕ್ಕಂ ನೇತೃತ್ವದಲ್ಲಿ ಮಹತ್ವದ ಸಭೆ-Boycott call in Bilisire village, important meeting led by Tahsildar Pradeep Nikkam
ಸಾಗರ ತಾಲೂಕು ಬಿಳಿಸಿರೆ ಗ್ರಾಮದಲ್ಲಿ ಬಹಿಷ್ಕಾರದ ಕೂಗು ಕೇಳಿ ಬಂದಿದ್ದು ಇಂದು ಪಿಡಿಒ, ತಹಶೀಲ್ದಾರ್ ಪ್ರದೀಪ್ ನಿಕ್ಕಂ ಅಧಿಕಾರಿಗಳ ಮುಂದೆ ಶಾಂತಿ ಸಭೆ ನಡೆದಿದೆ.
ಗ್ರಾಮದ ಕಲಾವತಿ ಹೇಮಾವತಿ ಮತ್ತು ಗಣಪತಿಗೆ ಎಂಬುವರಿಗೆ ಬಹಿಷ್ಕಾರ ಕೂಗು ಕೇಳಿ ಬಂದಿದ್ದು, ಗ್ರಾಮ ಸಮಿತಿಯ ವತಿಯಿಂದ ಬಹಿಷ್ಕಾರದ ಅವಮಾನ ತಾಳಲಾರದೆ ಕಲಾವತಿ ಅವರ ಅತ್ತೆ ಕನ್ನಮ್ಮ ಎಂಬ ಮಹಿಳೆ ಪಾಯಿಸನ್ ಸೇವಿಸಿ ಏ.27 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಬಹಿಷ್ಕಾರದ ಹಿನ್ನಲೆಯಲ್ಲಿ ವಿಷಸೇವಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗಣಪತಿ, ಕಲಾವತಿ, ಹೇಮಾವತಿ ಮತ್ತು ಸುರೇಂದ್ರರವರು ದಾಯಾದಿಗಳಾಗಿದ್ದು, ಇವರುಗಳಲ್ಲಿ ಸುರೇಂದ್ರ ಬಿಳಿಸಿರೆ ಗ್ರಾಮದ ಕಮಿಟಿಯಲ್ಲುದ್ದು ತಾವು ಬೇರೆ ಗ್ರಾಮಕ್ಕೆ ಹೋಗುವುದಾಗಿ ಹೇಳಿದ ನಂತರ ಈ ನಾಲ್ವರನ್ನ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ, ಬಹಿಷ್ಕಾರ ಹಾಕಿದ ಹಿನ್ನಲೆಯಲ್ಲಿ ಕನ್ನಮ್ಮ ವಿಷ ಸೇವಿಸಿರುವುದಾಗಿ ಕುಟುಂಬ ಸಭೆಯಲ್ಲಿ ಆರೋಪಿಸಿದೆ.
ಊರಿನ ಕಮಿಟಿಯವರು ನಮಗೆ ದಮಕಿ ಹಾಕಿದ್ದಾರೆ. ಒಂದು ವಾರ ಸಮಯ ನೀಟಿ ತೀರ್ಮಾನಿಸುವುದಾಗಿ ಹೇಳಿದ್ದ ಸಮಿತಿ ತೀರ್ಮಾನಿಸಿಲ್ಲ.
ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ ಎರಡೂ ಕಡೆಯವರನ್ನ ಕರೆಯಿಸಿ ತೀರ್ಮಾನಿಸಿದರೂ. ಬಹಿಷ್ಕರ ಹಾಕಿಲ್ಲ ಕಮಿಟಿಯವರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ ಗ್ರಾಮದಲ್ಲಿ ಆ ಬಹಿಷ್ಕಾರ ನಮ್ಮ ಕುಟುಂಬಕ್ಕೆ ಮುಂದುವರೆದಿದೆ ಎಂದು ಬಹಿಷ್ಕಾರಕ್ಕೊಳಗಾದ ನಾಲ್ವರುದೂರಿದ್ದಾರೆ.
ತಮ್ಮ ಮತ್ತು ತಮ್ಮನ ಹೆಂಡತಿವರಿಗೆ ಬಹಿಷ್ಕಾರ ಹಾಕಲಾಗಿದೆ. ಕನ್ನಮ್ಮ ಮೊಮ್ಮಕಳು ಅಂಗಡಿಗೆ ಹೋದಾಗ ಐಟಂಮ್ಸ್ ಕೊಡಲ್ಲ. ಊರಿನವರು ಬಹಿಷ್ಕಾರ ಹಾಕಿರುವುದಾಗಿ ಅಂಗಡಿ ಮಾಲೀಕ ಹೇಳಿದ್ದಾನೆ ಎಂದು ಕುಟುಂಬ ತುಂಬಿದ ಸಭೆಯಲ್ಲಿ ಆರೋಪಿಸಿದ್ದಾರೆ. ರಜೆ ಬಂದಾಗ ಅಡಿಕೆ ಸುಲಿಯಲು ಹೋದಾಗಲೂ ಇವರ ಕುಟುಂಬವನ್ನ ಯಾರೂ ಕರೆಯುವುದಿಲ್ಲ. ಕಾರಣ ಬಹಿಷ್ಕಾರದಿಂದಾಗಿ ತತ್ತರವಾಗಿದೆ. ಮೊಮ್ಮಕ್ಕಳು ಬಹಿಷ್ಕಾರ ಹಾಕಲಾಗಿದ್ದರಿಂದ ಮನನೊಂದು ಅಜ್ಜಿ ಕನ್ನಮ್ಮ ಬಳಿ ಹೇಳಿಕೊಂಡಿದ್ದು, ಅಜ್ಜಿ ಕನ್ನಮ್ಮ ಕಳೆ ನಾಶಕ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಲಾಗಿದೆ ಎಂದು ಕುಟುಂಬ ತಿಳಿಸಿದೆ.
ಆದರೆ ಗ್ರಾಮ ಕಮಿಟಿಯ ಶೇಖರಪ್ಪ ಮಾತನಾಡಿ, ಗ್ರಾಮಸಮಿತಿಗೆ ಸುರೇಂದ್ರವರು ಅರಣ್ಯ ಒತ್ತುವರಿ ಮಾಡಿದಾಗ ದಂಡಹಾಕುವ ಕ್ರಮವನ್ನ ತೆಗೆಯುವ ಒತ್ತಡ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸುರೇಂದ್ರ ಕಮಿಟಿ ಒತ್ತುವರಿ ಸಮಸ್ಯೆಗೆ ದಂಡ ಹಾಕಿರುವುದಾಗಿ ಸುರೇಂದ್ರ ಆರೋಪಿಸಿದ್ದಾರೆ
ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಗ್ರಾಮ ಕಮಿಟಿಗೆ ದಂಡ ಹಾಕಲು ಅಧಿಕಾರವಿಲ್ಲ. ಗ್ರಾಮದ ಉಳಿವಿಗೆ ಕಮಿಟಿ ಅನಿವಾರ್ಯ. ಇದು ಮುಂದು ವರೆದರೆ ದೂರುದಾರರು ಮತ್ತು ಆರೋಪಿಗಳಿಬ್ಬರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಸಾಮಾಜಿಕ ಬಹಿಷ್ಕಾರ ಗ್ರಾಮದಲ್ಲಿ ಇರಲ್ಲ.
ಇದನ್ನ ಜಿಲ್ಲಾಡಳಿತ ಇಲ್ಲಿಗೆ ಬಿಡಲ್ಲ. ಸೌಹಾರ್ಧ ಮೂಡುವ ವರೆಗೆ ನಮ್ಮ ಅಧಿಕಾರಿಗಳು ಸಿಬ್ಬಂದಿ ಇದನ್ನ ಗಮನಿಸುತ್ತಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
Boycott call in Bilisire village, important meeting led by Tahsildar Pradeep Nikkam

