SUDDILIVE || SHIVAMOGGA
ಕನಿಷ್ಠ ವೇತನ, ಕಾರ್ಮಿಕರ ಖಾಯಮಾತಿಗಾಗಿ ಸಿಐಟಿಯು ಪ್ರತಿಭಟನೆ- CITU protests for minimum wage, permanent workers' rights
ಮಾಸಿಕ ಸರಾಸರಿ ೩೬ ಸಾವಿರ ರೂ. ಕನಿಷ್ಠ ವೇತನ, ಕಾರ್ಮಿಕರ ಖಾಯಮಾತಿಗಾಗಿ ಶಾಸನ ರೂಪಿಸಲು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗಳಿಗನುಗುಣವಾಗಿ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನನ್ವಯ ರಾಜ್ಯದಲ್ಲಿ ವೇತನ ಪರಿಷ್ಕರಣೆ ಆಗಬೇಕು.ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ ೨೦೨೫ ಏಪ್ರಿಲ್ ೧೧ ರಿಂದಲೇ ಪೂರ್ವಾನ್ವಯಿಸಿ ಅಧಿಸೂಚನೆ ಕನಿಷ್ಠ ವೇತನ ಜಾರಿಗೆ ತರುವ ಬದಲಾಗಿ ೨೦೨೬ ಮೇ ೨೨ ರಂದು ಹೊರಡಿಸಿದ ದಿನದಿಂದ ಜಾರಿಗೆ ತಂದಿದೆ. ಇದು ಬಹುಸಂಖ್ಯಾತ ಕಾರ್ಮಿಕರಿಗೆ ಅರಿಯರ್ಸ್ ಬಾರದಂತೆ ಮಾಡಿದೆ. ತಿದ್ದುಪಡಿ ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ ೨೦೨೫ ರಿಂದಲೇ ಜಾರಿಗೆ ಮಾಡಿ ಅಧಿಸೂಚನೆ ಹೊರಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾರ್ಮಿಕರನ್ನು ನವಗುಲಾಮಗಿರಿಗೆ ದೂಡುವ ಕೇಂದ್ರ ಸರ್ಕಾರದ ನಾಲ್ಕು ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ದೇಶದ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರ ಈ ನಾಲ್ಕು ಸಂಹಿತೆಗಳಿಗೆ ಕಾರ್ಮಿಕರ ಪರವಾದ ಕರ್ನಾಟಕ ತಿದ್ದುಪಡಿಗಳನ್ನು ತರಬೇಕು, ನಂತರ ನಿಯಮಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಖಾಯಂಯೇತರರ ಖಾಯಂಗೆ ಶಾಸನ ರೂಪಿಸಬೇಕು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹಂಗಾಮಿ, ಗುತ್ತಿಗೆ, ನಿಯಮಿತ ಅವಧಿ, ಟೈನಿ, ಇನ್ನಿತರ ಸ್ವರೂಪದ ಖಾಯಂಯೇತರ ಕಾರ್ಮಿಕರು ಕಡಿಮೆ ವೇತನಕ್ಕೆ, ಯಾವುದೇ ಕಾನೂನುಬದ್ಧ ಸವಲತ್ತುಗಳಿಲ್ಲದೆ ಅಭದ್ರತೆಯಲ್ಲಿ ದುಡಿಮೆ ಮಾಡುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ಕರಡು ಸಿದ್ಧಪಡಿಸಿತ್ತು. ಪ್ರಸ್ತುತ ನಿಯಂತ್ರಿಸಿ ಖಾಯಂಯೇತರರ ಖಾಯಂಗೆ ಶಾಸನ ರೂಪಿಸಲು ಸರ್ಕಾರದಡಿಯಲ್ಲಿನ ಸೊಸೈಟಿ ಮಾದರಿಯನ್ನು ಕೈಬಿಟ್ಟು ರಾಜ್ಯದಲ್ಲಿ ಖಾಯಂಯೇತರ ಖಾಯಂಗೆ ಶಾಸನ ರೂಪಿಸಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಸಿಐಟಿಯು ಸಂಚಾಲಕ ಎಂ., ನಾರಾಯಣ, ಸಹ ಸಂಚಾಲಕಿ ಹನುಮಮ್ಮ, ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಂಗಾರಪ್ಪ, ಮುಖಂಡರಾದ ಕೆ ಎಲ್ ರಾವ್, ಮುನಿರಾಜು, ಪರಮೇಶ್, ರಂಗಸ್ವಾಮಿ, ಉಪೇಂದ್ರ, ಸಂತೋಷ್ ಮೊದಲಾದವರಿದ್ದರು.
CITU protests for minimum wage, permanent workers' rights

