SUDDILIVE || SHIVAMOGGA
ಮನೆಕಳವು ಪ್ರಕರಣದ ದೂರು ದಾಖಲು- Housebreaking case complaint filed
ಮನೆ ಕಳ್ಳತನ ಪ್ರಕರಣದ ವಿರುದ್ಧ ದಾಖಲಾದ ಪ್ರಕರಣವನ್ನ ವಿನೋಬ ನಗರ ಪೊಲೀಸರು ಬೇಧಿಸಿ ಆರೋಪಿಯನ್ನ ಪತ್ತೆಹಚ್ಚಿದ್ದಾರೆ.
ದಿನಾಂಕ 26/05/2026 ರಂದು ಮದ್ಯಾಹ್ನ 12-30 ಪಿಎಂ ಗಂಟೆಯಿಂದ ಸಂಜೆ 04-30 ಪಿಎಂ ಗಂಟೆಯ ಸಮಯದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಪುರ ಲಕ್ಕಪ್ಪ ಲೇ ಔಟ್ 2ನೇ ಕ್ರಾಸ್ ನಲ್ಲಿರುವ ಒಂದು ಮನೆಯಲ್ಲಿ 7 ಲಕ್ಷ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹೆಚ್ ಎಲ್ ಸೋಮಶೇಖರ್ ಬಿನ್ ಲಕ್ಕಪ್ಪ 46 ವರ್ಷ ವಾಸ 2ನೇ ಕ್ರಾಸ್ ಲಕ್ಕಪ್ಪ ಲೇ ಔಟ್ ಕಾಶಿಪುರ ಶಿವಮೊಗ್ಗ ಟೌನ್ ರವರು ದಿನಾಂಕ 27/05/2026 ರಂದು ರಆತ್ರಿ 10-00 ಪಿಎಂ ಗಂಟೆಗೆ ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಸಿ ಆರ್ ನಂ 106/2026 ಕಲಂ ಕಲಂ 305 ಬಿಎನ್ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.
ಈ ಮೇಲ್ಕಂಡ ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ ನಗದು ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಸಂತೋಷಕುಮಾರ್ ಡಿ.ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಶ್ರೀ ರಾಜು ಕೆ ಆರ್ ಸಿಪಿಸಿ, ಶ್ರೀ ಚಂದ್ರಾನಾಯ್ಕ ಬಿ ಸಿಪಿಸಿ, ಶ್ರೀ ಮಲ್ಲಪ್ಪ ಎಸ್ ಜಿ ಸಿಪಿಸಿ, ಶ್ರೀ ಅರುಣಕುಮಾರ್ ಎನ್ ಕೆ ಸಿಪಿಸಿ, ಶ್ರೀ ಮನುಶಂಕರ ಸಿಪಿಸಿ, ರವರ ತಂಡ ರಚಿಸಿದ್ದು, ಸದರಿಯವರು ಆರೋಪಿತರ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದ 1. ಮೊಹಮದ್ ಸಲೀಮ್ 27 ವರ್ಷ ಟಿಪ್ಪುನಗರ ಶಿವಮೊಗ್ಗ & 2. ಮೊಹಮದ್ ರಜಾಕ್ 26 ವರ್ಷ ಟಿಪ್ಪುನಗರ ಶಿವಮೊಗ್ಗ ಇವರುಗಳನ್ನು ಬಂಧಿಸಿ ಅವರು ಕಡೆಯಿಂದ ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ 5,13,000/- ರೂ ನಗದು ಹಣವನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.
Housebreaking case complaint filed

