ಸಿಎಂ ನಿಂದ 1000 ಕೆಪಿಎಸ್ ಶಾಲೆ ಲೋಕರ್ಪಣೆ- ಮಧು ಬಂಗಾರಪ್ಪ-CM to dedicate 1000 KPS schools to the public - Madhu Bangarappa

 SUDDILIVE || SHIVAMOGGA

ಸಿಎಂ ನಿಂದ 1000 ಕೆಪಿಎಸ್ ಶಾಲೆ ಲೋಕರ್ಪಣೆ- ಮಧು ಬಂಗಾರಪ್ಪ-CM to dedicate 1000 KPS schools to the public - Madhu Bangarappa   

Madhu, Bangarappa

 

ಶಿವಮೊಗ್ಗಕ್ಕೆ ಜೂ.1 ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು ಒಂದು ಸಾವಿರ ಕೆಪಿಎಸ್ ಶಾಲೆ ಉದ್ಘಾಟನೆಯನ್ನ ಮಾಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಅವರು ಫ್ರೀಡಂ ಪಾರ್ಕ್ ನಲ್ಲಿ  ಸಿಎಂ ಕಾರ್ಯಕ್ರಮ ನಡೆಯುವ ಜಾಗ ಪರಶೀಲನೆ ನಡಸಿ ನಂತರ ಮಾಧ್ಯಮಗಳಿಗೆ ಮಾತನಾಡಿದರು.  ಕಳೆದ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ 86.1% ಇತ್ತು. ಈ ಬಾರಿ 7% ಹೆಚ್ಚಾಗಿದೆ. ಸಿಎಂ ಬರುವುದರ ಒಳಗೆ ಎರಡನೇ ಪರೀಕ್ಷೆ ಫಲಿತಾಂಶ ಸಹ ಪ್ರಕಟಿಸುವ ಪ್ರಯತ್ನ ಮಾಡಲಾಗುವುದು ಎಂದರು. 

ಒಂದು ದಿನವೂ ಸಿಎಂ ಬಳಿ ಬಜೆಟ್ ಕೊಡಿ ಎಂದಿರಲಿಲ್ಲ. ಶಿಕ್ಷಣ ಇಲಾಖೆ ಸವಾಲಿನ ಇಲಾಖೆಯಾಗಿತ್ತು. ಬಹುತೇಕ ಸುಧಾರಣೆಯಾಗಿದೆ. ಈ ಹಿಂದೆ 62% ಪಾಸಿಂಗ್ ಮಾರ್ಕ್ಸ್ ಇತ್ತು.  ಇದರಲ್ಲಿ ಗುಣಮಟ್ಟವಿರಲಿಲ್ಲ. ಈ ಬಾರಿ 66.5% ಆಗಿದೆ. ಅಂದರೆ 4.5% ಗುಣಮಟ್ಟದ ಶಿಕ್ಷಣ ಹೆಚ್ಚಾಗಿದೆ ಎಂದರು. 

ಅತಿಥಿ ಶಿಕ್ಷಕರನ್ನ ಕಳೆದ ಬಾರಿ ನೀಡಲಾಗಿತ್ತು. ಕಳೆದ ಬಾರಿ ಈ ಕೆಲಸ ಆಗಿದ್ದಕ್ಕೆ ಈ ವರ್ಷ ಉತ್ತಮ ಗುಣಮಟ್ಟದ ಫಲಿತಾಂಶ ನೀಡಲಾಗಿದೆ. ಜೂ.01 ರ ಒಳಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗುವುದು. ಇದುವರೆಗೆ 307 ಕೆಪಿಎಸ್ ಶಾಲೆಯಿತ್ತು. ಈಗ 500 ಹೆಚ್ಚು ಮಾಡಿ 800 ಶಾಲೆಯನ್ನ ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ. ಉಳಿದಿದ್ದು ಒಂದುವರೆ ತಿಂಗಳು ಬಿಟ್ಟು ಲೋಕರ್ಪಣೆ ಮಾಡಲಿದ್ದೇವೆ ಎಂದರು. 

ಐದು ಗ್ಯಾರೆಂಟಿ ನಂತರ ಶಿಕ್ಷಣದ ಗ್ಯಾರೆಂಟಿ ನೀಡಲಿದ್ದೇವೆ. ಸಿಎಂ‌ ಕಾರ್ಯಕ್ರಮದಲ್ಪಿ ನಮ್ಮ ಜಿಲ್ಲೆಗೆ ಬೇರೆ ಬೇರೆ ಯೋಜನೆಯ ಘೋಷಣೆ ಆಗಲಿದೆ. ಡಿಸಿಎಂ ಡಿಕೆಶಿ ಸಹ ಇರ್ತಾರೆ. ಜೂ.1 ರಂದು ಮದ್ಯಾಹ್ನ ಸಿಎಂ ಮಕ್ಕಳ ಜೊತೆ ಸೇವಿಸಲಿದ್ದಾರೆ. ಊಟದಲ್ಲಿ ನ್ಯೂಟ್ರಿಷಿಯನ್  ನೀಡಲಾಗಿದೆ. ಶಿಕ್ಷಣ, ಮಾನವೀಯತೆ ಮೌಲ್ಯವನ್ನ ಹೆಚ್ಚಿಸಲಾಗಿದೆ. 850 ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಮಕ್ಕಳಿಗೆ 600 ಕ್ಕೂ ಹೆಚ್ಚು ಮಾರ್ಕ್ಸ್ ತೆಗೆದವರಿಗೆ ಇದೇ ವೇಳೆ ಸನ್ಮಾನಿಸಲಾಗುವುದು. 625 ತೆಗೆದ ಮಕ್ಕಳನ್ನ ಪ್ರತ್ಯೇಕವಾಗಿ ಸನ್ಮಾನಿಸಲಾಗುವುದು ಎಂದರು. 

ದುರ್ಗಿಗುಡಿ, ಮಿಳಘಟ್ಟ ಸಿಎಸ್ ಆರ್ ಫಂಡ್ ನಲ್ಲಿ ಕೆಪಿಎಸ್ ಶಾಲೆ ಯನ್ನ ಘೋಷಿಸಲಾಗುವುದು. ಜಿಲ್ಲೆಯಲ್ಲಿ ಸಿದ್ದವಾಗಿರುವ  19 ಕೆಪಿಎಸ್ ಶಾಲೆಗಳನ್ನ ಈ ವೇಳೆ  ಲೋಕಾರ್ಪಣೆಯಾಗಲಿದೆ. ಹಳೆಯದು 11 ಶಾಲೆಯಿದೆ. ಸೆಕೆಂಡ್ ಸ್ಟೇಜ್ ನಲ್ಲಿ ಕ್ಯಾನ್ಸರ್ ಶಾಲೆ ತೆಗೆದುಕೊಳ್ಳಲಿದ್ದೇವೆ ಎಂದರು.

ಅನುದಾನ ರಹಿತ ಕನ್ನಡ ಶಾಲೆಗಳ ಬಗ್ಗೆ ಕೂಗು ಇದೆ. ಎರಡು ಬಜೆಟ್ ನಲ್ಲಿ ಸಿಎಂಗೆ ಮನವಿ ಮಾಡಿರುವೆ 5 ವರ್ಷಕ್ಕಾದರೂ ಅವರನ್ನ ಖಾಯಂಗೊಳಿಸಿ ಎಂದಿರುವೆ. ಜೂ.1 ರ ಒಳಗೆ ಈ ಶಿಕ್ಷಕರ ಮನವೊಲಸುವ ಪ್ರಯತ್ನ ನಡೆಸಲಾಗುವುದು. ಅನುದಾನ ನೀಡೋದು ಮತ್ತು ಅನುದಾನವನ್ನ ಉಳಿಸಿಕೊಳ್ಳುವುದು ಎರಡೂ ಸವಾಲಾಗಿದೆ. ಜೂ.1 ರ ಒಳಗೆ ಈ ಶಿಕ್ಷಕರ ಜೊತೆ ಎರಡು ಬಾರಿ ಸಭೆ ನಡೆಯಲಿದೆ ಎಂದರು. 

ಹೊಳೆಹೊನ್ನೂರು ಭಾಗದಲ್ಲಿ ಮಳೆಹಾನಿಯಾಗಿದೆ. ಸಾಗರ, ಹೊಳೆಹೊನ್ನೂರು, ಸೊರಬದಲ್ಲಿ ವಿಶೇಷ ಅನುದಾನ ನೀಡಲು ಯೋಚಿಸಲಾಗಿದೆ. ಹುಲಿಕಲ್ ಘಾಟಿಯ ದುರಂತದಲ್ಲಿ ಸಾವನ್ನಪ್ಪಿದವರಿಗೆ ಇಂದು ಪರಿಹಾರ ನೀಡಲಾಗುತ್ತಿದೆ ಎಂದರು. 

ಕೇಂದ್ರಿಯ ವಿದ್ಯಾಲಯ, ಮಹಾರಾಷ್ಟ್ರದಲ್ಲಿ ಹಿಜಬ್ ಅವಕಾಶ ನೀಡಲಾಗಿದೆ. ಸೊಸೈಟಿಯಲ್ಲಿ ಮಕ್ಕಳನ್ನ ಹಾಳು ಮಾಡುವ ಯೋಜನೆಯಾಗಿವೆ. ಹಿಂದೂ ಸಂಘಟನೆ ಇದಕ್ಕೆ ವಿರೋಧಿಸುವುದು ರಬಿಶ್ ಎಂದ ಅವರು ನೀಟ್ ಪರೀಕ್ಷೆ ರದ್ದು ಮಾಡಿ ಐದು ಜನ ಮಕ್ಕಳ ಪ್ರಾಣ ಕಳೆದರಲ್ಲಾ ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕಿತ್ತು. ಪ್ರಧಾನಿಗಳಾದರೂ ಅವರ ತಲೆದಂಡ ಆಗಬೇಕಿತ್ತು ಎಂದು ಗುಡುಗಿದರು. 

ಬಿಜೆಪಿ ಈ ಬಗ್ಗೆ ಮಾತನಾಡೊಲ್ಲ. ಬರೀ ಜಾತಿ ಧರ್ಮ ಕಾಣಿಸೋದಾ? ಜನಿವಾರ ಶಿವಧಾರ ಅನುಮತಿ ನೀಡಿದ್ದು ಕಾಣಿಸೊಲ್ವಾ ಇವರಿಗೆ ಎಂದು ಗುಡುಗಿದರು. ಎಸ್ಐಆರ್ ಫಾಲೋ ಮಾಡಿ ರೆಗ್ಯೂಲರ್ ಸಭೆ ನಡೆಸಲಾಗಿದೆ. ಮತದಾನದ ಹಕ್ಕು ಕಳೆದುಕೊಳ್ಳಬಾರದು. ಡಿಲೀಟ್ ಪದ್ಧತಿ ಇದೆ. ಅಕ್ಟೋಬರ್ ನಿಂದ ಎಸ್ಐಆರ್ ನಡೆಯಲಿದೆ. 

ಅಣುಸ್ಥಾವರ ಎಲ್ಲ ಕೈಬಿಡಲಾಗಿದೆ. ಬುಲ್ಡೋಜರ್ ಸಂಸ್ಕೃತಿ ಕೇಂದ್ರದ್ದು ನಡೆದರೆ ಜನರನ್ನ ಎಬ್ಬಿಸಲಾಗುವುದು. ಮಾಹಿತಿ ಕೇಳಿರ್ತಾರೆ ಎಲ್ಲಾ ಡಿಸಿಗಳು ಕೊಟ್ಟಿರುತ್ತಾರೆ ಅಷ್ಟೆ. ಬೇಸೂರಿನಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಆಗಲು ಬಿಡಲ್ಲ ಎಂದರು.

CM to dedicate 1000 KPS schools to the public - Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close