SUDDILIVE || SHIVAMOGGA
ಕಾಂಗ್ರೆಸ್ ಈ ದೇಶದ ಕ್ಷಮೆಯಾಚಿಸಬೇಕು- ಶಾಸಕ ಚೆನ್ನಿ-Congress should apologize to this country - MLA Chenny
ತಮಿಳುನಾಡಿನ ಮುಖ್ಯಮಂತ್ರಿ ಭಯೋತ್ಪಾದನೆ ದಿನದಂದು ರಾಜೀವ್ ಗಾಂಧಿ ಹತ್ಯೆ ಮಾಡಿದ ಪ್ರಭಾಕರನ್ ನ್ನ ಗೌರವಿಸಿದನ್ನ ಶಾಸಕ ಚೆನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆ ಭಾರತದ ಭದ್ರತೆಗೆ ಎರಗಿದ ಸವಾಲುಗಳಾಗಿವೆ. ಪ್ರಯೋಜಿತ, ಇಸ್ಲಾಮಿಕ್ ಮೂಲಭದ್ರತೆಯ ಹಿತಾಸಕ್ತಿಗಳಾಗಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸೈಬರ್ ದಾಳಿ, ಆತ್ಮಹತ್ಯೆ ದಾಳಿ, ಈಶಾನ್ಯ ಭಾಗದ ಸಂಗತಿ ಮೂಲಕ ದೇಶದಲ್ಲಿ ಅಭದ್ರತೆಯನ್ನ ಹುಟ್ಟುಹಾಕಲಾಗಿದೆ. 1991 ರಲ್ಲಿ ಪೆಡಂಬೂರ್ ನಲ್ಲಿ ರಾಜೀವ್ ಗಾಂಧಿ ಹತ್ಯೆ, ಇದಕ್ಜೂ ಮೊದಲು ಇಂದಿರಾಗಾಂಧಿ ಹತ್ಯೆಯಾಗಿದೆ. ಹಾಗಾಗಿ ಮೇ21 ರಂದು ವಿಪಿಸಿಂಗ್ ಸರ್ಕಾರ ಅಂದು ಜನಜಾಗೃತಿ ಮೂಡಿಸಲು ಯೋಚಿಸಿ ಮೇ.21 ರಂದು ಭಯೋತ್ಪಾದಕ ದಿನ ಎಂದು ಘೋಷಿಸಿದ್ದರು. ಅಂದಿನಿಂದ ಇಂದಿನ ವರೆಗೆ ಬಂದ ಸಂಗತಿಗಳಲ್ಲಿ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ನಡರದುಕೊಂಡ ರೀತಿ ಅನುಮಾನಗಳನ್ನ ಹುಟ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದರೆ ಕಾಂಗ್ರೆಸ್ ತನ್ನ ನಾಯಕನನ್ನ ಕಳೆದು ಕೊಂಡರೂ ತಮಿಳುನಾಡಿ ಸಿಎಂಗೆ ಬೆಂಬಲಿಸಿದೆ. ಎಲ್ ಟಿ ಟಿ ನಾಯಕ ಪ್ರಭಾಕರನ್ ನ್ನ ಗೌರವಿಸಿದ್ದವರನ್ನ ಬೆಂಬಲಿಸಿದ ಕಾಂಗ್ರೆಸ್ ಈ ದೇಶದ ಕ್ಷಮೆ ಕೇಳಬೇಕು. ಭಯೋತ್ಪಾದಕತೆಯ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳುತ್ತಿರುವ ವೇಳೆ ರಾಹುಲ್ ಗಾಂಧಿ ಯಾರಿಗೆ ಬೆಂಬಲಿಸುತ್ತಿದ್ದಾರೆ ಎಂಬುದನ್ನ ಪುನರ್ ವಿಮರ್ಶಿಸಬೇಕಿದೆ ಎಂದರು.
ಭಯೋತ್ಪಾದಕತೆಯ ವಿರುದ್ಧ ಕ್ರಮ ಕೈಗೊಳ್ಳಲು ಹೊರಟಾಗ, ಪೆಹಲ್ಗಾಮ್ ವಿರುದ್ಧ ಕ್ರಮ ಕೈಗೊಳ್ಳಲು ಹೊರಟಾಗ ಕಾಂಗ್ರೆಸ್ ಏನೆಲ್ಲ ಮಾತನಾಡಿತು ಎಂದ ಅವರು. ಹಾಗಾಗಿ ಈ ದೇಶ ಕ್ಷಮೆಯಾಚಿಸಬೇಕು ಇಂದಿರಾಗಾಂಧಿಯ ಹತ್ಯೆ ನಡೆದ ದಿನವನ್ನ ರಾಷ್ಟ್ರಿಯ ಸಂಕಲ್ಪ ದಿನ ಎಂದು ಹಾಗೂ ರಾಜೀವ್ ಹತ್ಯೆ ದಿನವನ್ನ ಭಯೋತ್ಪಾದಕರ ದಿನ ಎಂದು ಆಚರಿಸುವ ವೇಳೆ ಕಾಂಗ್ರೆಸ್ ನಿಲುವೇನಾಗಿರಬೇಕಿತ್ತು. ಈಗ ಏನಾಗಿದೆ ಎಂದು ಪ್ರಶ್ನಿಸಿದರು.
2014 ರ ವರೆಗೆ 126 ಜಿಲ್ಲೆ ನಕ್ಸಲ್ ಪೀಡಿತ ಜಿಲ್ಲೆಗಳಿದ್ದವು. 2004-14 ರವರೆಗೆ ನಡೆದ ಸಾವಿಗೂ 2014 ರಿಂದ 2025 ರವರೆಗೆ ನಡೆದ ಸಾವಿಗೂ ಶೇ.75% ಕಡಿಮೆಯಾಗಿದೆ. ಆಪರೇಷನ್ ಬ್ಲೂಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ವೀರಭದ್ರ, ಬಾಲಕೋಟ್, ಆಪರೇಷನ್ ಸಿಂಧೂರು, ಆಪರೇಷನ್ ಆಲ್ ಔಟ್ ಗನ್ನ ಭಯೋತ್ಪಾದನೆಯ ವಿರುದ್ಧ ನಡೆದಿದೆ. ದೇಶದ ಭದ್ರತೆ ಬಗ್ಗೆ ಕಾಂಗ್ರೆಸ್ ಯೋಚಿಸಿಲ್ಲ ಎಂದರು.
ತಮಿಳು ನಾಡಿನ ವಿಜಯ್ ಎಲ್ ಎಲ್ ಟಿ ಇ ಪ್ರಭಾಕರ್ ನ್ನ ಗೌರವಿಸಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಿದ್ದೀರಿ. ಅವರ ಮಾನಸಿಕತೆ ಅರ್ಥ ಆಗಬೇಕು. ತಾಲಿಬಾನಿಗಳನ್ನ ಭಾರತ ಬೆಂಬಲಿಸಿದರ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು ನಾವು ಬೆಂಬಲಿಸಿ ಹಣ ನೀಡಿರುವುದು ಸಾರ್ವಜನಿಕರ ಹಿತದೃಷ್ಠಿಗಾಗಿ ಎಂದರು.

