SUDDILIVE || SHIVAMOGGA
ರೈಲು ಸೇವೆಗಳಲ್ಲಿ ಬದಲಾವಣೆ-Change in train services
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರೇಹಳ್ಳಿ ಯಾರ್ಡ್‌ನಲ್ಲಿ ಅತ್ಯಗತ್ಯ ಸುರಕ್ಷತಾ ಮತ್ತು ಸಿಗ್ನಲಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಮೇ 20, 2026 ರಂದು ಈ ಕೆಳಗಿನ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ವಿವರ ಈ ಕೆಳಗಿನಂತಿವೆ:
I. ರೈಲುಗಳ ಮಾರ್ಗ ಬದಲಾವಣೆ:
1. ಮೇ 20, 2026 ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.
2. ಮೇ 20, 2026 ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ವಿಶ್ವಮಾನವ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ಪಾಂಡವಪುರದಿಂದ ತಿಪಟೂರಿನವರೆಗಿನ ಎಲ್ಲಾ ನಿಲ್ದಾಣಗಳ ನಿಲುಗಡೆಯನ್ನು ಇರುವುದಿಲ್ಲ.
II. ರೈಲುಗಳ ಭಾಗಶಃ ರದ್ದು:
1. ಮೇ 20, 2026 ರಂದು ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ದೊಡ್ಬೆಲೆಯಲ್ಲಿ ಕೊನೆಗೊಳ್ಳಲಿದೆ.
2. ಮೇ 20, 2026 ರಂದು ರೈಲು ಸಂಖ್ಯೆ 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ತುಮಕೂರಿನ ಬದಲಾಗಿ ದೊಡ್ಡಬೆಲೆ ನಿಲ್ದಾಣದಿಂದ ನಿಗದಿತ ಸಮಯಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.
III. ರೈಲುಗಳ ನಿಯಂತ್ರಣ:
1. ಮೇ 19, 2026 ರಂದು ವೇಲಂಕಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣಿ–ವಾಸ್ಕೊ ಡ ಗಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ (ವಿಳಂಬವಾಗಲಿದೆ).
2. ಮೇ 20, 2026 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳ ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ದಗಂಗಾ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗಮಧ್ಯೆ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿವೆ.
Change in train services
