SUDDILIVE || SHIVAMOGGA
ಮಹಾನಗರ ನೌಕರ ರಂಗನಾಥ್ ರಸ್ತೆ ಅಪಘಾತದಲ್ಲಿ ಸಾವು- City employee Ranganath dies in road accident
ಅಲ್ಕೋಳ ಸರ್ಕಲ್ ಬಳಿ ವೇಗದ ಬಂದ ಬೈಕ್ ವೊಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದು ಪಾದಚಾರಿ ಸ್ಥಳದಲಗಲಿಯೇ ಸಾವು ಕಂಡಿದ್ದಾರೆ. ಸಾವುಕಂಡ ವ್ಯಕ್ತಿಯನ್ನ ಪಾಲಿಕೆ ನೌಕರ ರಂಗನಾಥ್ ಎಂದು ಗುರುತಿಸಲಾಗಿದೆ.
ಘಟನೆ ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್ ಸಮೀಪ ಇರುವ ಶ್ರೀನಿಧಿ ವೈನ್‌ಸ್ ಬಳಿ ನಡೆದಿದ್ದು, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ವ್ಯಕ್ತಿ ರಂಗಣ್ಣ(32) ರನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಅಪಘಾತದ ರಭಸಕ್ಕೆ ರಂಗಣ್ಣ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು, ತಕ್ಷಣ ಅವರನ್ನು ಶಿವಮೊಗ್ಗದ McGann Hospital ಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಸಾವು ಕಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಬೈಕ್ ಸವಾರರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ. ರಂಗನಾಥ್ ಮಾಜಿ ಶಾಸಕ ಆಪ್ತರಾಗಿದ್ದಾರೆ.
https://www.suddilive.in/2026/05/That-Fight-Between-Siblings-Over-That-Trivial-Reason-Ends-in-Murder.html
City employee Ranganath dies in road accident
