SUDDILIVE || SHIVAMOGGA
ನೀಟ್ ಪರೀಕ್ಷೆ ರದ್ದು ಹಿನ್ನಲೆ, ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಲಿ-ಆರ್ ಪ್ರಸನ್ನ ಕುಮಾರ್ - Union Education Minister should resign after NEET exam cancellation: R Prasanna Kumar
ಮೇ.03 ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ರದ್ದು ಮಾಡಿದ ಕೇಂದ್ತ ಸರ್ಕಾರ 23 ಲಕ್ಷ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024 ರಲ್ಲೊ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಸಮಿತಿ ರಚಿಸಲಾಯಿತು ಸಮಿತಿ ನೀಡಿದ ವರದಿ ಧೂಳುಹಿಡಿದಿದೆ ಕ್ರಮ ಜರುಗಿಲ್ಲ. ಕೇಂದ್ರ ಸರ್ಕಾರ ಬೇರೆ ವಿಷಯವನ್ನ ರಾಜಕಾರಣ ಮಾಡುತ್ತದೆ. ಇದನ್ನೂ ರಾಜಕಾರಣ ಮಾಡಿಕೊಂಡಿದೆ ಎಂದು ಆರೋಪಿಸಿದರು.
1.64 ಲಕ್ಷ ರಾಜ್ಯದಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ರದ್ದು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಡೋಲಾಯ ಮಾಡಿದೆ. ಹಾಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪೋಷಕರು ಪರೀಕ್ಷೆ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ನೀಟ್ ಪರೀಕ್ಷೆ ರದ್ದು ಮಾಡಿ ಆಯಾ ರಾಜ್ಯ ಸರ್ಕಾರಕ್ಕೆ ಸಿಇಟಿ ಪರೀಕ್ಷೆ ಬರೆಯುವ ಅವಶ್ಯಕತೆಯಿದೆ ಎಂದರು.
ಪ್ರಧಾನಿ ಮೋದಿ ಮಿತಬಳಕೆ ಹೇಳಿಕೆ ನೀಡಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಹೊಡೆತ ಬಿದ್ದಿದೆ ಹಾಗಾಗಿ ಶ್ವೇತ ಪತ್ರ ಹೊರಡಿಸಬೇಕು. ಇದನ್ನ ಕೇಳಿದರೆ ಇಂದಿರಾ ಗಾಂಧಿ ಅವರ ಸಮಯದಲ್ಲಿ ಮಿತ ಬಳಕೆ ಮಾಡಲು ಹೇಳಿದ್ದರು ಎಂದು ಪತ್ರಿಕೆಯಲ್ಲಿ ಬಂದಿದೆ. ಇದೊಂದು ಜಾಲವಾಗಿದೆ. ಇಂದಿರಾ ಗಾಂಧಿ ಹಾಗೆ ಹೇಳಿಲ್ಲ. ಡೋಂಗಿತನವನ್ನ ಬಿಜೆಪಿ ಬಿಡಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಬಳಕೆಯನ್ನ ಶಾಲೆಗಳಲ್ಲಿ ಬಳಸ ಬಹುದಾಗಿದೆ. ಬಿಜೆಪಿ ನಿಷೇಧಿಸಿತ್ತು. ಆದರೆ ನಮ್ಮ ಪಕ್ಷ ಎಲ್ಲವನ್ನೂ ಬಳಕೆ ಮಾಡಲು ಸೂಚಿಸಿದೆ. ಅದನ್ನ ಸ್ವಾಗತಿಸುವುದಾಗಿ ಹೇಳಿದರು. ಕುವೆಂಪು ವಿಶ್ವ ವಿದ್ಯನಿಲಯದಲ್ಲಿ ಎನ್ ಎಸ್ ಯು ಐ ನಡೆದ ಪ್ರತಿಭಟನೆಯಲ್ಲಿ ಪಾಟ್ ಗಳ ಹೊಡೆದು ಹಾಕಿದ ಪ್ರಕರಣದಲ್ಲಿ ಸಂಘಟನೆ ಭಾಗಿಯಾಗಿಲ್ಲ ಕೆಲವರು ಹೊಡೆದು ಹಾಕಿದ್ದಾರೆ. ಅದರ ಬಗ್ಗೆ ಪ್ರಕರಣ ನಡೆದಿದೆ ಎಂದರು.
https://www.suddilive.in/2026/05/City-employee-Ranganath-dies-in-road-accident.html
Union Education Minister should resign after NEET exam cancellation: R Prasanna Kumar
