SUDDILIVE || SHIVAMOGGA
ಹೆಲ್ಮೆಟ್ ಧರಿಸುವ ವಿಚಾರದಲ್ಲಿ ಪೊಲೀಸರೊಂದಿಗೆ ಗಲಾಟೆ, ಬಿತ್ತು ಕೇಸ್- Clashes with police over helmet wearing, case filed
ಹೆಲ್ಮೆಟ್ ಧರಿಸಿ ಎಂದ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದು ಪೊಲೀಸರನ್ನೇ ತಳ್ಳಾಡಿದ ಇಬ್ಬರು ಯುವಕರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಾಂಕ:04-05-2026 ರಂದು ಬೆಳಗ್ಗೆ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಮತ್ತು ಸಿಬ್ಬಂದಿ ಸಂತೋಶ್ ರವರುಗಳು ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ, ದ್ವಿ ಚಕ್ರ ವಾಹನ ಸವಾರನೊಬ್ಬನು ಶಿರಸ್ತ್ರಾಣ(ಹೆಲಗಮೆಟ್) ಧರಿಸದೆ, ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದನ್ನು.
ಇದನ್ನನ ಗಮನಿಸಿದ ಪೊಲೀಸರು ಬೈಕ್ ಸವಾರನಿಗೆ ನಿಲ್ಲಿಸಲು ಸೂಚಿಸಿದ್ದು, ಬೈಕ್ ಸವಾರ ಸಯ್ಯದ್ ಮುಜಾಮಿಲ್ ನು ರಸ್ತೆಯ ಮಧ್ಯ ಬೈಕ್ ನಿಲ್ಲಿಸಿಕೊಂಡು ವಾಗ್ವಾದಕ್ಕೆ ಇಳಿದಿದ್ದಾನೆ. ಅವನಿಗೆ ಶಿರಸ್ತ್ರಾಣ ಧರಿಸಬೇಕಾದ ಮಹತ್ವದ ಬಗ್ಗೆ ಹೇಳುತ್ತಿದ್ದವೇಳೆ ಅಲ್ಲಿಗೆ ಬಂದ ಜಬಿವುಲ್ಲಾ ಎಂಬುವವನು ನಾವು ಹೆಲ್ಮೆಟ್ ಹಾಕುವುದಿಲ್ಲ ಏನು ಮಾಡುತ್ತೀಯ ಎಂದು ಇಬ್ಬರೂ ಸೇರಿ ಪೊಲೀಸ್ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಳ್ಳಿ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಬೈಕಿನ ಕೀ ಕಿತ್ತು ಕೊಂಡು ನಿಮಗೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿ, ಬೈಕ್ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 99/2026 ಕಲಂ 121(1), 132, 3(5) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
Clashes with police over helmet wearing, case filed
