ಕಾಂಗ್ರೆಸ್ ಕಾರ್ಯಕರ್ತರ ಸಭೆ ರದ್ದು-ಸಚಿವರು ಹೇಳಿದ್ದೇನು?- Congress workers' meeting cancelled - what did the minister say?

SUDDILIVE || SHIVAMOGGA

ಕಾಂಗ್ರೆಸ್ ಕಾರ್ಯಕರ್ತರ ಸಭೆ ರದ್ದು-ಸಚಿವರು ಹೇಳಿದ್ದೇನು?-  Congress workers' meeting cancelled - what did the minister say?   

Congress, worker


ಸಿಎಂ ಬದಲಾವಣೆ ಕುರಿತು ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದು, ಕೆಪಿಎಸ್ ಶಾಲೆ ಆರಂಭದ ಸಭೆ ಹಿನ್ನೆಲೆಯಲ್ಲಿ ಬಂದಿದ್ದೆನೆ. ಸಭೆ ಮುಗಿಸಿ ಬೆಂಗಳೂರಿಗೆ ತೆರಳಿದ ಬಳಿಕ ಈ ಬಗ್ಗೆ ಮಾಹಿತಿ ಸಿಗಲಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಹೆಚ್ಚು ಮಾಹಿತಿ ನನ್ನ ಬಳಿ ಇಲ್ಲ. ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕರೆದಿದ್ದಾರೆ. ಕೆಲವು ನಿರ್ಧಾರಗಳು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಇದನ್ನು ನಾನು ಬಹಳ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆನೆ.ಸಚಿವರಾಗಿ ನಮಗೆ ಲಿಮಿಟೇಷನ್ ಇರುತ್ತದೆ ಇಂತಹ ಸಮಯದಲ್ಲಿ ಹೇಗೆ ಇರಬೇಕು, ಸಂದರ್ಭವನ್ನು ನಿಭಾಯಿಸುವುದು ಮುಖ್ಯವಾಗುತ್ತದೆ ಎಂದರು.

1ನೇ ತಾರಿಖಿನ ಕಾರ್ಯಕ್ರಮ ನಿರ್ಧಾರವಾಗಿದೆ ಕೆಪಿಎಸ್ ಶಾಲೆ ಆರಂಭ ಒಂದೆರೆಡು ದಿನವಾದರೂ ಆಗಿಯೇ ಆಗುತ್ತದೆ.1ನೇ ತಾರಿಖು ಎಲ್ಲಾ ಶಾಲೆ ನಿರೀಕ್ಷೆಯಂತೆ ಆರಂಭವಾಗಲಿದೆ. ಈ ಬಗ್ಗೆ ಬಳಿಕ ಮಾಹಿತಿ ನೀಡುತ್ತೇನೆ ಎಂದರು.

ಮೊದಲು ಬೆಂಗಳೂರಿಗೆ ತೆರಳಿ ಸಿಎಂ ಬಳಿ ಚರ್ಚಿಸಿದ ಬಳಿಕವಷ್ಟೇ ನಿರ್ಧಾರವಾಗಲಿದೆಅಲ್ಲಿಯವರೆಗೂ ಏನೂ ಹೇಳಲು ಆಗಲ್ಲ. ನಿಮಗೇನೆ ನಮಗಿಂತ ಮೊದಲೇ ಗೊತ್ತಾಗಲಿದೆ ಒಳಗೊಂದು ಕ್ಯಾಮೆರಾ, ಹೊರಗೊಂದು ಕ್ಯಾಮೆರಾ ಇಟ್ಟು ನೀವೆ ಹೇಳುತ್ತಿರ ಎಂದರು

29 ರಿಂದಲೇ ಶಾಲೆಗಳು ಆರಂಭವಾಗಲಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ತಯಾರಿ ನಡೆದಿದೆ. ಈಗಾಗಲೇ ಈ ಬಗ್ಗೆ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ನೀಡಬಹುದಾದ ಎಲ್ಲವೂ ನೀಡಲು ಸೂಚನೆ ನೀಡಿದ್ದೆನೆ. ಪೋಷಕರು, ಶಿಕ್ಷಕರು ಸೇರಿ ಎಲ್ಲರೂ ಶಾಲೆಗೆ ಮಕ್ಕಳನ್ನು ಆಹ್ವಾನಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. 

ಜೂ.1 ರಂದು ಸಿಎಂ ಡಿಸಿಎಂ ಕಾರ್ಯಕ್ರಮ  ಫ್ರೀಡಂ ಪಾರ್ಕ್ ನಡೆಯಲಿದ್ದು ಇಂದು ಕಾರ್ಯಕರ್ತರ ಸಭೆ ನಡೆಯಬೇಕಿತ್ತು. ಆದರೆ ಈ ಎಲ್ಲ ಸಭೆಯನ್ನ ಸಚಿವರು ಸಭೆ ರದ್ದುಪಡಿಸಿರುವುದು ಸಿಎಂ ಬದಲಾವಣೆಯ ಗಾಳಿ ಜೋರಾಗಿ ಬೀಸಿದ್ದರಿಂದ ಸಭೆ ರದ್ದಾಗಿರುವ ಅನುಮಾನವೂ ಹೆಚ್ಚಿದೆ. 

Congress workers' meeting cancelled - what did the minister say?  

Congress-workers-meeting-cancelled-what-did-the-minister-say

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close