SUDDILIVE || BHADRAVATHI
ಜಿಂಕೆ ಮಾಂಸ ಮಾರಾಟ, ಪ್ರಮುಖ ಆರೋಪಿ ಎಸ್ಕೇಪ್-Deer meat sale, main accused escapes
ಜಿಂಕೆ ಮಾಂಸ ತಂದು ಮಾರುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿರುವ ಅರಣ್ಯ ಇಲಾಖೆ 20 ಕೆ.ಜಿ ಜಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಕಾಚಗೊಂಡನಹಳ್ಳಿಯ ಆರ್ಮುಗ ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್, ಹೊಸಸಿದ್ದಾಪುರ ಮೂರ್ತಿ ಬಂಧಿತರಾಗಿದ್ದಾರೆ.
ಕಾಡಿನಲ್ಲಿ ಜಿಂಕೆ ಬೇಟೆಯಾಡಿ ನಗರಕ್ಕೆ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಿಲಿಟರಿ ಕ್ಯಾಂಪ್, ಬಸ್ ನಿಲ್ದಾಣ, ಸಂತೆ ಮೈದಾನದ ಬಳಿ ಮಾಂಸದ ಜತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 20 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ.
![]() |
| ಎಸ್ಕೇಪ್ ಆಗಿರುವ ಆರೋಪಿ |
ಪ್ರಮುಖ ಆರೋಪಿ ಆರ್ಮುಗ ಸಿಕ್ಕರೆ ಬೇಟೆಯಾಡಿದ ಪ್ರದೇಶ, ಇತರೆ ವಿಚಾರಗಳು ತಿಳಿಯಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಪ್ರಮುಖ ಆರೋಪಿ ಅರುಮುಗಮ್ ಮತ್ತು ಸಂತೋಷ್ ಜೊತೆ ಸೇರಿ ನಾಲ್ಕೈದು ವರ್ಷಗಳಿಂದ ಈ ಮಾಂಸದ ದಂದೆ ನಡೆಸುತ್ತಿದ್ದು ಜೊತೆಗೆ ಜಿಂಕೆ ಮಾಂಸ ಅಂತ ಹೇಳಿ ಅನೇಕ ಸಲ ಗೋವಿನ ಮಾಂಸ ಮಾರಾಟ ಮಾಡಿರುವ ಬಗ್ಗೆನೂ ಸ್ಥಳೀಯರು ಆರೋಪಿಸಿದ್ದಾರೆ.
Deer meat sale, main accused escapes


