ಹೈಕೋರ್ಟ್ ಪೀಠ ಸ್ಥಾಪನೆಗೆ ಬಿಜೆಪಿ, ರಾಷ್ಟ್ರಭಕ್ತರ ಬಳಗ ಮುಖಾಮುಖಿ- BJP, Nationalist group clash over High Court bench formation

SUDDILIVE || SHIVAMOGGA

ಹೈಕೋರ್ಟ್ ಪೀಠ ಸ್ಥಾಪನೆಗೆ ಬಿಜೆಪಿ, ರಾಷ್ಟ್ರಭಕ್ತರ ಬಳಗ ಮುಖಾಮುಖಿ- BJP, Nationalist group clash over High Court bench formation 

Bjp, balaga

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ರಚನೆ ಆಗಬೇಕೆಂದುವಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸಂಸದ ರಾಘವೇಂದ್ರ, ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್ ಸೇರಿದಂತೆ ಹಲವು ನ ಜೆಪಿ ನಾಯಕರು ಇಂದು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 

ಇದೇ ವೇಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ  ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲಸೂಚಿಸಿದೆ. ಈ ವೇಳೆ ಸಂಸದ ರಾಘವೇಂದ್ರ ಮತ್ತು ಈಶ್ವರಪ್ಪ ಮುಖಾಮುಖಿಯಾಗಿದ್ದಾರೆ. 

ಶಿವಮೊಗ್ಗ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ 8 ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಸಂಸದರು ಮಾತನಾಡಿ,  ಕೇಂದ್ರ ಸರ್ಕಾರದ ಕಾನೂನು ಮಂತ್ರಿಯನ್ನ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸೋಣ. ನೀವು ಹೇಳಿದ ಸಮಯದಂದು ಭೇಟಿ ಮಾಡಿ ಬೇಡಿಕೆಯನ್ನ ಇಡೋಣ ಎಂದು ಭರವಸೆ ನೀಡಿದರು. 

ಬಸಪ್ಪಗೌಡ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಿ ಮನಸ್ಸು ಮಾಡಿದರೂ ಅಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬಹುದು. ರಾಜ್ಯ ಸರ್ಕಾರ ಹೆಚ್ಚು ಕಡಿಮೆ ಮಾಡಿ ಮಂಗಳೂರಿಗೆ ಶಿವಮೊಗ್ಗ ಸೇರಿಸಿದರೆ ಕೇಂದ್ರ ಸರ್ಕಾರಕ್ಕೆ ಹೋಗಬಹುದು ಎಂದರು. ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ಹೈಕೋರ್ಟ್ ಪೀಠ ಎಲ್ಲಿ ಸ್ಥಾಪನೆಯಾದರೂ ವಕೀಲರಿಗೆ ಸಮಸ್ಯೆಯಾಗಲ್ಲ ಅದು ಸಮಸ್ಯೆಯಾಗುವುದು ಕಕ್ಷಿದಾರರಿಗೆ ಎಂದರು. 

ಸಾರ್ವಜನಿಕರು ಮಂಗಳೂರಿಗೆ ಶಿವಮೊಗ್ಗ ಸೇರಿದರೆ ಕಕ್ಷಿದಾಋಉ ಬೈದುಕೊಳ್ಳಬಾರದು ಎಂಬುದಕ್ಕೆ ಹೋರಾಟ ಮಾಡುತ್ತಿದ್ದೇವೆ. ಜೂ.1 ರಂದು ಮುಖ್ಯ ಮಂತ್ರಿಗಳು ಶಿವಮೊಗ್ಗಕ್ಕೆ ಬರುತ್ತಿದ್ದು ಒಟ್ಟಾಗಿ ಅವರಿಗೂ ಮನವಿ ನೀಡೋಣ. ಮನವಿಯಲ್ಲಿ ಜಸ್ವಂತ್ ವರದಿ ಹೇಳಿದಂತೆ ಉಲ್ಲೇಖಿಸಿ ನೀಡೋಣ ಎಂದರು. 

BJP, Nationalist group clash over High Court bench formation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close