SUDDILIVE || SHIVAMOGGA
Dysp ಆಗಿ ಡಾ.ಬೆನಕ ಪ್ರಸಾದ್ ವರ್ಗ, ಬಾಬು ಅಂಜನಪ್ಪರಿಗೆ ಜಾಗ ತೋರಿಸದೆ ವರ್ಗ-Dr. Benaka Prasad Varagh as Dysp, Babu Anjanappa was transferred without showing any space
ದಿಡೀರ್ ಬೆಳವಣಿಗೆಯಲ್ಲಿ ಸಾಗರದ ಎಎಸ್ಪಿ ಡಾ.ಬೆನಕ ಪ್ರಸಾದ್ ರನ್ನ ಶಿವಮೊಗ್ಗದ ಉಪವಿಭಾಗಾಧಿಕಾರಿಯನ್ನಾಗಿ ನೇಮಿಸಿ ವರ್ಗಗೊಳಿಸಿದೆ. ಇದೇ ಜಾಗದಲ್ಲಿದ್ದ ಡಿವೈಎಸ್ಪಿ ಬಾಬು ಅಂಜನಪ್ಪನವರಿಗೆ ಜಾಗ ತೋರಿಸದೆ ವರ್ಗಗೊಳಿಸಿದೆ.
ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಡಾ. ಈ. ಬೆನಕ ಪ್ರಸಾದ್ ಮೂರನೇ ಪ್ರಯತ್ನದಲ್ಲಿ 92ನೇ ರ್‍ಯಾಂಕ್ ಪಡೆದು ಕರ್ನಾಟಕದ ಟಾಪರ್ ಸಾಲು ಸೇರಿದ್ದಾರೆ.
ನಿವೃತ್ತ ಉಪನ್ಯಾಸಕ ನಾಗರಕಟ್ಟೆ ದಿ. ಜಯಣ್ಣ ಹಾಗೂ ಪಂಕಜಾ ದಂಪತಿಗಳಿಗೆ ಮೂವರು ಮಕ್ಕಳು. ಮೊದಲನೇ ಪುತ್ರ ವಿಶ್ವಚೇತನ ಅವರು ಪ್ರೌಢಶಾಲೆಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಎರಡನೇ ಮಗಳು ಪ್ರಿಯಾಂಕಾ ಸಿಎಂ ಕಚೇರಿಯಲ್ಲಿ ಎಸ್.ಡಿ.ಎ. ಆಗಿ ಕೆಲಸ ಮಾಡುತ್ತಿದ್ದು, ಮೂರನೇ ಮಗನಾಗಿ ಡಾ. ಬೆನಕ ಪ್ರಸಾದ್ ವೈದ್ಯಾಧಿಕಾರಿಯಾ ಕೆಲಸ ಮಾಡಿಕೊಂಡು ಈ ಸಾಧನೆ ಮಾಡಿ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದ್ದರು.
ಸಿಂಗಲ್ ಆದೇಶದಲ್ಲಿ ಡಾ.ಬೆನಕ ಪ್ರಸಾದ್ ಅವರದ್ದು ಮಾತ್ರ ಹೆಸರು ಕಾಣಿಸಿಕೊಂಡಿದ್ದು, ಬಾಬು ಅಂಜನಪ್ಪನವರಿಗೆ ಸಧ್ಯಕ್ಕೆ ಜಾಗ ತೋರಿಸಿಲ್ಲ. 2025 ರಲ್ಲಿ ಡಾ. ಬೆನಕ ಪ್ರಸಾದ್ ಸಾಗರದ ಎಎಸ್ಪಿ ಆಗಿ ವರ್ಗವಾಗಿದ್ದರು.
Dr. Benaka Prasad Varagh as Dysp, Babu Anjanappa was transferred without showing any space


