SUDDILIVE || SHIVAMOGGA
ಮಕ್ಕಳ ಜೊತೆ ಮಹಿಳೆ ನಾಪತ್ತೆ ಗುರುತು ಪತ್ತೆಯಾದರೆ ಠಾಣೆಗೆ ಮಾಹಿತಿ ನೀಡಿ-If a woman with children is found missing, inform the police
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ 17ನೇ ಮೈಲಿಕಲ್ಲು, ಕಣಗಲಕೊಪ್ಪ ಗ್ರಾಮ ನಿವಾಸಿ ಅನಿಲ್ ಕುಮಾರ್ ಎಂಬುವವರ ಪತ್ನಿ ತವರುಮನೆಗೆಂದು ಮಕ್ಕಳನ್ನು ಕರೆದುಕೊಂಡು ಮೇ.13 ರಂದು ಹೋದವರು ತವರುಮನೆಗೂ ಹೋಗದೆ ಈವರೆಗೆ ಮನೆಗೂ ವಾಪಾಸ್ಸಾಗಿರುವುದಿಲ್ಲ.
ಸುಮಾ ಕೆ.ಎಸ್. : 32 ವರ್ಷ, 5.0 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಜಯಂತ್: 14 ವರ್ಷ, 04 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಶರ್ವ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ವಿಸ್ಮಿತ: 12 ವರ್ಷ, 04 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ
ಈ ಮೂರು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆಯನ್ನು 08181-235142/228310/08182-261413/9480803353/9480803333/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
If a woman with children is found missing, inform the police

