SUDDILIVE || SHIVAMOGGA
ಅಕ್ರಮ ಗೋಸಾಕಾಣಿಕೆಯ ಅಡಿ ಫಾರೂಕ್ ಅರೆಸ್ಟ್ - Farooq arrested for illegal cow slaughter
ಶಿವಮೊಗ್ಗದಲ್ಲಿ ಹಸುಗಳನ್ನ ಕಾಪಾಡಿಕೊಳ್ಳುವುದೇ ಸವಾಲಾಗುತ್ತಿದೆ. ಕಸಾಯಿ ಖಾನೆಗೆ ಕಳುಹಿಸಲು ಅಕ್ರಮವಾಗಿ ಕಟ್ಟಿಕೊಂಡಿದ್ದ 12 ಹಸುಗಳನ್ನ ತುಂಗ ನಗರ ಪೊಲೀಸರು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ.
ಶಿವಮೊಗ್ಗ ನಗರ ಸೂಳೇ ಬೈಲು ಈದ್ಗನಗರದ ಹತ್ತಿರದಲ್ಲಿ ಅಕ್ರಮವನ್ನ ಕಟ್ಟಿಹಾಕಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತುಂಗ ನಗರದ ಪಿಐ ಗುರುರಾಜ್ ಕೆಟಿ ನೇತೃತ್ವದಲ್ಲಿ ಅವರ ಸಿಬ್ಬಂದಿಗಳು ಖಡಕ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಬ್ದುಲ್ ಅಜೀಜ್ ಬಿನ್ ಅಬ್ದುಲ್ ಗಫರ್ ಅಲಿಯಾಸ್ ಫಾರೂಕ್ (35) ಎಂಬಾತನನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿ ಫಾರೂಕ್ ಬೇರೆ ಜಿಲ್ಲೆಯಿಂದ ಲಕ್ಷಾನುಗಟ್ಟಲೆ ಬೆಲೆಬಾಳುವ ಹೋರಿಗಳನ್ನ ತಂದು ಹಿಂಸಾತ್ಮಕವಾಗಿ ಕಟ್ಟಿಟ್ಟದ್ದ. ಆದರೆ ಪೊಲೀಸರ ದಾಳಿಯಲ್ಲಿ ಸಿಕ್ಕಿಕೊಂಡಿದ್ದಾನೆ. ಫಾರೂಕ್ ಸೂಳೆಬೈಲಿನ ವಾಸಿಯಾಗಿದ್ದಾನೆ. ಫಿಶ್ ಪ್ಲಾಂಟ್ ಕೆಲಸ ಮಾಡಿಕೊಂಡಿದ್ದ.
ಅಕ್ರಮ ಗೋವಿನ ಸಾಕಾಣಿಕೆ ಅಡಿಯಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ನಿಧಾನವಾಗಿ ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಣಿಕೆ, ಗೋವುಗಳನ್ನ ಕಟ್ಟಿ ಹಾಕಿರುವ ಬಗ್ಗೆ ಹಲವು ಠಾಣೆಗಳಲ್ಲಿ ದೂರು ದಾಖಲಾಗಿವೆ.
Farooq arrested for illegal cow slaughter

