SUDDILIVE || SHIVAMOGGA
ರಸ್ತೆ ಅಪಘಾತದಲ್ಲಿ ವಿಜಿ ಸಾವು-VIJI dies in road accident
ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಕ್ರೆಬೈಲಿನ ಪ್ರಕೃತಿ ಫಿಶ್ ಹೊಟೇಲ್ ಮಾಲೀಕ ವಿಜಯ್ ಕುಮಾರ್ ಇಂದು ಕೊನೆಯುಸಿರೆಳೆದಿದ್ದಾರೆ.
ಅರಕೆರೆ ಬಳಿ ಅಪಘಾತ
ಸೋಮವಾರ ರಾತ್ರಿ ಶಿವಮೊಗ್ಗದಿಂದ ಸಕ್ರೆಬೈಲು ಕಡೆಗೆ ತೆರಳುವಾಗ ಅಪಘಾತ ಸಂಭವಿಸಿತ್ತು. ಅರಕೆರೆ ಬಳಿ ಅಪಘಾತವಾಗಿ ವಿಜಯ್ ಕುಮಾರ್ (42) ಅವರ ತಲೆಗೆ ತೀವ್ರ ಪೆಟ್ಟಾಗಿತ್ತು ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು
ಚಿಕಿತ್ಸೆ ಫಲಕಾರಿಯಾಗದೆ ಸಾವು
ಕಳೆದ ರಾತ್ರಿಯೆ ವಿಜಯ್ ಕುಮಾರ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನದವರೆಗೆ ಚಿಕಿತ್ಸೆ ನಡೆಯಿತು. ಆದರೆ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ವಿಜಯ್ ಕುಮಾರ್ ಅವರು ಸಕ್ರೆಬೈಲು ನಿವಾಸಿಯಾಗಿದ್ದಾರೆ.
VIJI dies in road accident
