SUDDILIVE || SHIVAMOGGA
ರುದ್ದಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಗಿರೀಶ್ ಆಗ್ರಹ-Girish demands that Ruddappa Lamani be given a ministerial position
ಮಾದಿಗ ದಂಡೋರ ಜೆ.ಹೆಚ್ ಮುನಿಯಪ್ಪನವರಿಗೆ ಡಿಸಿಎಂ ಸ್ಥಾನ ನೀಡುವ ಜೊತೆ ಉತ್ತಮ ಸಚಿವ ಸ್ಥಾನ ನೀಡಬೇಕು ಎಂದು ಸುದ್ದಿಗೋಷ್ಠಿ ನಡೆಸಿದರೆ ರಾಜ್ಯ ಬಂಜಾರ ಯುವಕ ಮತ್ತು ವಿದ್ಯಾರ್ಥಿ ಸಂಘ ಹಾವೇರಿ ಶಾಸಕ ರುದ್ರಪ್ಪ ಲಮಾಣಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಮಾನ ನೀಡುವಂತೆ ಒತ್ತಾಯಿಸಿದೆ
ಸಂಘದ ಸಂಚಾಲಕ ಗಿರೀಶ್, ರಾಜ್ಯದಲ್ಲಿ 2023 ರಲ್ಲಿ 60 ಮೀಸಲು ಕ್ಷೇತ್ರದಿಂದ 36 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಬಂದಿದೆ. ಈ ಹಿಂದೆ ಡಿಕೆಶಿ ಅವರು ಲಮಾಣಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಿಎಂ ಆಗುತ್ತಿವ ಡಿಕೆ ಶಿವಕುಮಾರ್ ಲಮಾಣಿ ಅವರನ್ನ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡುವಂತೆ ಆಗ್ರಹಿಸಿದರು.
ರುದ್ರಪ್ಪ ಲಮಾಣಿ 3 ಬಾರಿ ಶಾಸಕರಾಗಿ ಒಂದು ಬಾರಿ ಕರ್ನಾಟಕ ಸರ್ಕಾರದ ಜವಳಿ ಮತ್ತು ಮುಜುರಾಯಿ ಇಲಾಖೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಮಾಜ ಪರ ಕಾಳಜಿ ದೂರು ದೃಷ್ಠಿಯುಳ್ಳ ಲಮಾಣಿ ಅವರಿಗೆ ಸವಿವ ಸ್ಥಾನ ಬೀಡುವಂತೆ ಒತ್ತಾಯಿಸಿದರು.
ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿಯ ಅಧ್ಯಕ್ಷರಾಗಿ ಊಹೆಗೂ ಮೀರಿದ ಅಭಿವೃದ್ಧಿಯನ್ನ ಮಾಡಿದ್ದಾರೆ.15 ಕೋಟಿಗೂ ಅಧಿಕ ಅನುದಾನವನ್ನ ತಂದು ಜನ್ಮಸ್ಥಳವನ್ನ ಅಭಿವೃದ್ಧಿ ಪಡಿಸಿದ್ದರು. ವಲಸೆ ಹೋಗಿವ ಮಕ್ಕಳಿಗೆ ಸಂತ ಸೇವಲಾಲ್ ವಲಸೆ ಮಕ್ಕಳ ವಸತಿ ಶಾಲೆ ಮತ್ತು ಸಂತ ಸೇವಾಲಾಲ್ ವಲಸೆ ಶಾಕೆಯನ್ನ ಆರಂಭಿಸಿದವರು ಲಮಾಣಿ ಎಂದರು.
Girish demands that Ruddappa Lamani be given a ministerial position

