SUDDILIVE || SHIVAMOGGA
ಕೆ.ಹೆಚ್ ಮುನಿಯಪ್ಪರನ್ನ ಡಿಸಿಎಂ ಮಾಡಲು ಡಿಎಸ್ ಎಸ್ ಆಗ್ರಹ-DSS demands K.H. Muniyappan to be made DCM
ಕೆ.ಹೆಚ್ ಮುನಿಯಪ್ಪನವರ ಪರ ಕರ್ನಾಟಕ ಮಾದರ ಮಹಾಸಭಾ ಬ್ಯಾಟ್ ಬೀಸಿದೆ. ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಎಸ್ ನ ಸಂಚಾಲಕ ಗುರುಮೂರ್ತಿ, ಸಿದ್ದರಾಮಯ್ಯನವರು ಸಿಎಂ ಸ್ಥಾನಕಗಕೆ ರಾಜೀನಾಮೆ ನೀಡಿದ ಹಿನ್ಬಲೆಯಲ್ಲಿ ಡಿಸಿಎಂ ಸ್ಥಾನವನ್ನ ನಾಲ್ಕು ಜಾತಿಗಳಿಗೆ ನೀಡುವ ಸಂಭವನೀಯತೆಯಿದೆ. ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಮುನಿಯಪ್ಪನವರು ಮೊದಲಾದ ನಾಯಕರು ಕಾಂಗ್ರೆಸ್ ನಲ್ಲಿ ಇದ್ದ ಕಾರಣ ಪಕ್ಷ ಸಧೃಢವಾಗುತ್ತಾ ಬಂದಿತ್ತು. ಮುನಿಯಪ್ಪ 7 ಬಾರಿ ಎಂಪಿ, ಮೂರುಬಾರಿ ಶಾಸಕರಾಗಿದ್ದಾರೆ. ರಾಜಕೀಯ ಅನುಬವ, ವ್ಯಕ್ತಿತ್ವ ಹಿರಿಯ ರಾಜಕಾರಣವಾಗಿದ್ದರಿಂದ ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳು ನೀಡುವ ಮೂಲಕ ಸಚಿವ ಸ್ಥಾನ ನೀಡುವಂತೆ ಆದಿ ಜಾಂಬವ, ಮಾದಿಗ ಮಹಾಸಭ ಆಗ್ರಹಿಸಿದೆ.
ಈಗನ ಕ್ಯಾಬಿನೆಟ್ ನಲ್ಲಿ 6 ಜನ ಮಾತ್ರ ಬಲಗೈಗೆ ನೀಡಲಾಗಿದೆ. ಈ ಬಾರಿ ಎಡಗೈ ಸಮುದಾಯದ ಕೆಹೆಚ್ ಮುನಿಯಪ್ಪನವರಿಗೆ ಡಿಸಿಎಂ ಸ್ಥಾನದ ಜಾಗಕ್ಕೆ ಉತ್ತಮ ಸಚಿವ ಸ್ಥಾನ ನೀಡಬೇಕು. ಮಾದಿಗ ಸಮಾಜಕ್ಕೆ ಕೊಟ್ಟಿರಲಿಲ್ಲ. ಬಿಜೆಪಿ ಗೋವಿಂದ ಕಾರಜೋಳರಿಗೆ ಡಿಸಿಎಂ ಮತ್ತು ಉತ್ತಮ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ಮಾದಿಗರಿಗೆ ನೀಡಿಲ್ಲ. ಹಾಗಾಗಿ ಈ ಬಾರಿ ಕೊಡುವ ಮೂಲಕ ಮಾದಿಗ ಸಮುದಾಯಕ್ಕೆ ಡಿಸಿಎಂಗೆ ನೀಡುವ ಮೂಲಕ ವಿಶ್ವಾಸ ಗೆಲ್ಲಬೇಕು ಎಂದರು.
ಸರ್ಕಾರ ಇದನ್ನ ಹಗೂರವಾಗಿ ತೆಗೆದುಕೊಂಡರೆ ಕಾಂಗ್ರೆಸ್ ಪರಿಣಾಮವನ್ನ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
DSS demands K.H. Muniyappan to be made DCM

