SUDDILIVE || SHIVAMOGGA
ಹಾಡೋನಹಳ್ಳಿ ಅಕ್ರಮ ಮರಳುಗಾರಿಕೆ ಮೇಲೆ ಎಸಿ ಅವರಿಂದ ದಾಳಿ, ಅಪಾರ ಪ್ರಮಾಣದ ಮರಳು ವಶ- Hadonahalli illegal sand mining raided again by AC, huge quantity of sand seized
ಶಿವಮೊಗ್ಗದ ಉಪವಿಭಾಗಾಧಿಕಾರಿ ಸತ್ಯ ನಾರಾಯಣ ಅವರ ನೇತೃತ್ವದಲ್ಲಿ ಹಾಡೋನಹಳ್ಳಿಯ ತುಂಗಭದ್ರ ನದಿಯಲ್ಲಿ ತೆಗೆಯುವ ಅಕ್ರಮ ಮರಳುಗಾರಿಕೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 80 ಲೋಡ್ ಮರಳು ಪತ್ತೆಯಾಗಿದೆ.
ನಿನ್ನೆ ರಾತ್ರಿ ನಡೆದ ಖಡಕ್ ದಾಳಿಯಲ್ಲಿ ನದಿಯ ಒಡಲಿನಿಂದ ಮಣ್ಣನ್ನ ತೆಗೆದು ವಾಶ್ ಮೂಲಕ ಮರಳನ್ನ ತೆಗೆಯುವಲ್ಲಿ ಹಾಡೋನಹಳ್ಳಿ ಮತ್ತಿತರೆಡೆ ಜಾಗ ಬಹಳ ಖ್ಯಾತಿ ಪಡೆದುಕೊಂಡಿದೆ. ಎಸಿ ಸತ್ಯನಾರಾಯಣ ಅವರು ಶ್ರಮವಹಿಸಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿದರು ಮರಳು ತೆಗೆಯುವ ಕಾರ್ಯಕ್ಕೆ ಮಾತ್ರ ಎಲ್ಲೂ ಬ್ರೇಕ್ ಬೀಳ್ತಾಯಿಲ್ಲ.
ಎಸಿ ಕೆಲವೊಮ್ಮೆ ಅಕ್ರಮ ಮರಳು ತೆಗೆಯುವ ಜಾಗದಲ್ಲಿ ಬೆಳಿಗ್ಗೆಯಿಂದ ರಾತ್ರಿ 7 ಗಂಟೆಯ ವರೆಗೆ ದಾಳಿ ನಡೆಸಿದ ಉದಾಹರಣೆಗಳಿವೆ. ಆದರೆ ಅಕ್ರಮ ಮರಳುಗಾರಿಕೆಯ ಮೇಲಿನ ದಾಳಿಯ ನಂತರ ಮತ್ತೆ ಅದೇ ಅಕ್ರಮ ಕಾರ್ಯ ಮುಂದುವರೆಯುತ್ತಿವೆ. ಇಲ್ಲಿ ಗ್ರಾಮಸ್ಥರು, ಪೊಲೀಸರು, ಮಾಧ್ಯಮ, ಗಣಿ ಇಲಾಖೆ ಸೇರಿದಂತೆ ಇತೆರೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಈ ಅಕ್ರಮ ಮರಳುಗಾರಿಕೆ ನಿಲ್ಲಬಹುದೆ ವಿನಃ ಎಸಿ ಸತ್ಯನಾರಾಯಣ ಅವರ ಒಬ್ಬರಿಂದ ಸಾಧ್ಯವಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹಾಡೋನಹಳ್ಳಿಯಲ್ಲಿ 2025 ರಿಂದ ಇದುವರೆಗೂ 13 ಕ್ಕೂ ಹೆಚ್ಚು ದಾಳಿ ನಡೆದಿದೆ. ನದಿಯ ಒಡಲು ಮಾತ್ರ ಬರಿದಾಗುತ್ತಿದೆ ವಿನಃ ಅಕ್ರಮಮರಳುಗಾರಿಕೆ ನಿಲ್ತಾಯಿಲ್ಲ. ಸರ್ಕಾರವೇ ಈ ಮರಳುಗಾರಿಕೆಯನ್ನ ಸಕ್ರಮಗೊಳಿಸಿ ಬೊಕ್ಕಸ ತುಂಬಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿಕಾಣುತ್ತಿಲ್ಲ. anyway! ಅಕ್ರಮಮರಳುಗಾರಿಕೆ ತಡೆಯಲು ಉಪವಿಭಾಗಾಧಿಕಾರಿಗಳು ನಡೆಸುತ್ತಿರುವ ಶ್ರಮಕ್ಕೆ ಒಂದು ಸಲ್ಯೂಟ್ ಹೊಡೆಯಬೇಕು.
ಸಧ್ಯಕ್ಕೆ ಮರಳನ್ನ ನದಿಯಲ್ಲೇ ಬಿಡಲಾಗಿದೆ. ದಾಳಿಯಲ್ಲಿ ಸಿಕ್ಕ ಮರಳನ್ನ ಕಾಯಲಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Hadonahalli illegal sand mining raided again by AC, huge quantity of sand seized

