SUDDILIVE || SHIVAMOGGA
ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸದಂತೆ ಕುರುಬರ ಒಕ್ಕೂಟ ಟಯರ್ ಸುಟ್ಟು ಆಕ್ರೋಶ-Kurubara Union strike over Siddaramaiah will be removed from the post of CM
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿಯೇ ಕುರುಬರ ಒಕ್ಕೂಟ ಎಂದು ಬೃಹತ್ ಪ್ರತಿಭಟನೆಗೆ ಇಳಿದಿದೆ ಶಿವಪ್ಪ ನಾಯಕ ವೃತ್ತದ ಬಳಿ ಟೈಯರ್ ಗಳನ್ನು ಸುಟ್ಟಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕೆಲ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಕೆಲ ಬೆಳವಣಿಗೆಗಳು ನಡೆದಿದ್ದು ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕನಕ ಯುವ ವೇದಿಕೆ ಕುರುಬ ಸಮಾಜ ಕುರುಬರ ವೇದಿಕೆ ಹೀಗೆ ಹಲವು ಸಂಘಟನೆಗಳು ವಾಟಾಳ್ ಮಂಜು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಗಳನ್ನಾಗಿ ಮುಂದುವರಿಸಬೇಕೆಂದು ಆಗ್ರಹಿಸಿದೆ.
ಈ ವೇಳೆ ಕನ್ನಡ ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ವಾಟಾಳ್ ಮಂಜು ಮಾತನಾಡಿ 15 ವರ್ಷಗಳ ಹಿಂದೆ ರಾಜ್ಯದಲ್ಲಿ ಧೂಳಿಪಟ ಆಗಿದ್ದ ಕಾಂಗ್ರೆಸ್ಸಿಗೆ ಆದರೆ ಆಗಿದ್ದು ಇದೇ ಸಿದ್ದರಾಮಯ್ಯನವರು ಸಿದ್ದರಾಮಯ್ಯನವರನ್ನು ಈಗ ಅಧಿಕಾರದಿಂದ ಕೆಳಗಿಳಿಸಿ, ಬೇರೆಯವರನ್ನು ಸಿಎಂ ಮಾಡಲು ಹೈಕಮಾಂಡ್ ಹೊರಟಿರುವುದು ಅನ್ಯಾಯ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Kurubara Union strike over Siddaramaiah will be removed from the post of CM

