SUDDILIVE || SHIVAMOGGA
ಬಕ್ರೀದ್ ಹಬ್ಬಕ್ಕೆ ಗೋಹತ್ಯೆಯಾಗದಂತೆ ತಡೆಯಲು ಹಿಂಜಾವೇ ಎಸ್ಪಿಗೆ ಮನವಿ- Hinjave appeals to SP to prevent cow slaughter for Bakrid festival
ಬಕ್ರೀದ್ ಹಬ್ಬಕ್ಕೆ ಗೋಹತ್ಯೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ದೇವರಾಜ್ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಇಂದು ಎಸ್ಪಿಗೆ ಮನವಿ ಸಲ್ಲಿಸಿದೆ.
ಮೇ ಕೊನೆಯ ವಾರದಲ್ಲಿ ಬಕ್ರೀದ್ ಹಬ್ಬ ಎಲ್ಲೆಡೆ ನಡೆಯಲಿದ್ದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋತ್ಯೆ ನಡೆಯದಂತೆ 24 ಗಂಟೆಗಳು ಕಾಯುವ ನಾಕಬಂದಿ ರಚಿಸಬೇಕು. ಹಿಂಸಾತ್ಮಕವಾಗಿ ಗೋಹತ್ಯೆಗಳನ್ನ ಸಾಗಿಸುವ ಮತ್ತು ವಧೆ ಮಾಡುವ ಕಸಾಯಿ ಖಾನೆಯನ್ನ ಪೂರ್ಣವಾಗಿ ವಶಕ್ಕೆ ಪಡೆಯುವಂತೆ ಮನವಿಯಲ್ಲಿ ಸಂಘಟನೆ ಆಗ್ರಹಿಸಿದೆ.
2020 ರಲ್ಲಿ ಜಾನುವಾರ ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಗೋಸಾಗಾಟ ಮಾಡದಂತೆ 2021 ರಿಂದ ಈ ಕಾನೂನುಗಳನ್ನ ಜಾರಿಗೊಳಿಸಲಾಗಿವೆ. ಅದರಂತೆ ಇಲಾಖೆ ಇಚ್ಛಾಶಕ್ತಿಯಿಂದ ಈ ಕಾನೂನನ್ನ ಸೂಕ್ತವಾಗಿ ಜಾರಿಗೊಳಿಸಬೇಕೆಂದರು.
ಈ ಹಿಂದಿನ ಪ್ರಕರಣಗಳಲ್ಲಿ ಸಿಕ್ಕಿಕೊಂಡವರನ್ನ ಕರೆಯಿಸಿ ವಾರ್ನ್ ಮಾಡಬೇಕು, ಗೋಹತ್ತೆ ಜಾಗಗಳನ್ನ ಪೊಲೀಸ್ ನಿಗಾದಲ್ಲಿರಿಸಬೇಕು. ಗೋಹತ್ತೆ ತಡೆಯ ಕಾರ್ಯಪಡೆ ರಚಿಸಬೇಕು. ಗೋಹತ್ಯೆ ನಡೆಸಿದವರಿಗೆ 7 ವರ್ಷ ಕಠಿಣ ಸಜೆ ಹಾಗೂ 5 ಲಕ್ಷ ದಂಡ ವಿಧಿಸುವಂತೆ ಸೂಕ್ತ ಕಾನೂನು ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಗೋಕಳುವಾಗುವ ಬಗ್ಗೆಯೂ ರೈತರಲ್ಲೂ ಜಾಗೃತಿ ಮೂಡಿಸಬೇಕು.
ಬೀಟ್ ಪೋಲೀಸರ ಮೂಲಕ ಗೋಹತ್ಯೆ ಜಾಗವನ್ನ ಗುರುತಿಸಿ ಬಂದ್ ಮಾಡಬೇಕು ಹಾಗೂ ಇತರೆ ಬೇಡಿಕೆ ಈಡೇರಿಸುವಂತೆ ಸಂಘಟನೆ ಎಸ್ಪಿಗೆ ಮನವಿ ಸಲ್ಲಿಸಿದೆ.
Hinjave appeals to SP to prevent cow slaughter for Bakrid festival
