SUDDILIVE || SHIVAMOGGA
ಮಗದೊಮ್ಮೆ ಜನಿವಾರಕ್ಕೆ ಕೈಹಾಕಿದರೆ ಸುಮ್ಮನಿರಲ್ಲ-ಗಣೇಶ್ ಎಚ್ಚರಿಕೆ-If you ever touches Janiwara, Brahamin will not keep quite - Ganesh warns
ಮೊನ್ನೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬೆಂಗಳೂರಿನ ಕೃಪ ನಿಧಿ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಮತ್ತೊಮ್ಮೆ ಜನಿವಾರಕ್ಕೆ ಕೈಹಾಕಿದರೆ ಸರ್ಕಾರಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣ ವಿದ್ಯಾರ್ಥಿಯನ್ನ ಹೊರತುಪಡಿಸಿ ಇತರೆ ಧರ್ಮೀಕಯರಿಗೆ ಜನಿವಾರ ತೆಗೆಸಿದ ಹಾಗೆ ಬ್ರಾಹ್ಮಣ ಸಕುದಾಯದ ವಿದ್ಯಾರ್ಥಿಗೆ ತೆಗೆಸಲಾಗಿದೆ. ಈ ಹಿಂದೆ ಇದೇ ಘಟನೆ ನಡೆದಾಗ ಬ್ರಾಹ್ಮಣ ಸಮುದಾಯ ಪ್ರತಿಭಟನೆ ನಡೆಸಿ ಮನವಿ ಸಲ್ಪಿಸಿದರೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರಾಹ್ಮಣರು ಶಾಂತಿಗೂ ಸಿದ್ದ ಕ್ರಾಂತಿಗೂ ಬದ್ದ, ಸಮಾಜ, ದೇಶ ಎಂದು ಬಂದಾಗ ಹೋರಾಟ ಮಾಡಿದ್ದೇವೆ. ಸಮುದಾಯಕ್ಕೆ ಧಕ್ಕೆ ಆದಾಗ ಸುಮ್ಮನಿರಲು ಸಾಧ್ಯವಿಲ್ಲ. ಸಣ್ಣ ಜನಿವಾರ ಸರ್ಕಾರಕ್ಕಾಗಲಿ, ಪರೀಕ್ಷೆಗಾಗಲಿ ಏನು ಸಮಸ್ಯೆ ಸೃಷ್ಠಿಸಿತ್ತು ಎಂಬುದುತಿಳಿಯಬೇಕಿದೆ ಎಂದರು.
ಸರ್ಕಾರ ಜನಿವಾರ ತೆಗೆಸಿದ್ದು ವೈಯಕ್ತವೋ ಅಥವಾ ಶಿಕ್ಷಣದ ನಿಯಮವೋ ಅಥವಾ ಸರ್ಕಾರದ ನಿಯಮವೋ ಎಂಬುದು ಸ್ಪಷ್ಟಪಡಿಸಬೇಕು. ಇದನ್ನ ಆಗ್ರಹಿಸಿ ಇಂದು ಸಂಜೆ 6 ಗಂಟೆಗೆ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು. ಶಿಕ್ಷಣ ಸಚಿವರು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ. ಸಮುದಾಯವನ್ನ ನಿಂದಿಸಲಾಗಿದೆ. ಅನ್ಯಧರ್ಮಿಯವರಿಗೆ ಪರೀಕ್ಷೆ ವೇಳೆ ಜನಿವಾರ ತೆಗೆಸಿದಂತೆ ಮಾಡಿಲ್ಲ ಯಾಕೆ? ಭಾರತೀಯ ಮಹಿಳೆಗೆ ಕುಂಕುಮ ಬೊಟ್ಟು, ಬಳೆ ತೆಗೆಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಇಂತಹ ಘಟನೆಗಳು ಮರುಕುಳಿಸದಂತೆ ಕಾನೂನು ಕ್ರಮ ಜರುಗಿಸಬೇಕು. ಆದಿಚುಂಚನಗಿರಿ ಶಿವಮೊಗ್ಗ ದಲ್ಲಿ ನಡೆದಾಗ ಸಂಘಟನೆ ಮನವಿ ಸಲ್ಲಿಸಿದರೂ ಮತ್ತೆ ಅದು ಮರುಕಳಿಸಿದೆ ಎಂದು ಅವರು ಆರೋಪಿಸಿದರು.
If you ever touches Janiwara, Brahamin will not keep quite - Ganesh warns
