ಪೆಟ್ರೋಲ್ ಡಿಸೇಲ್ ದರದಲ್ಲಿ ಹೆಚ್ಚಳ- Increase in petrol and diesel prices

SUDDILIVE || SHIVAMOGGA

ಪೆಟ್ರೋಲ್ ಡಿಸೇಲ್ ದರದಲ್ಲಿ ಹೆಚ್ಚಳ- Increase in petrol and diesel prices    

Petrol, diesel

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಇಂಧನ ದರ ಏರಿಕೆಯ ಚರ್ಚೆ ಕೊನೆಗು ನಿಜವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿದೆ. ದೇಶಾದ್ಯಂತ ದರ ಹೆಚ್ಚಳ ಜಾರಿಯಾಗಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿಯು ತಕ್ಷಣದಿಂದಲೇ ನೂತನ ದರ ಜಾರಿಗೆ ಬಂದಿದೆ. ಬೆಳಿಗ್ಗೆ 6 ಗಂಟೆಯಿಂದಲೇ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಹೆಚ್ಚಳ ಕಂಡಿದೆ. ಸುಮಾರು ಮೂರು ನಾಲ್ಕು ವರ್ಷಗಳಿಂದ ದರ ಸ್ಥರತೆ ಕಂಡಿದ್ದ ತೈಲದರದಲ್ಲಿ ಅಮೇರಿಕಾ ಇರಾನ್ ಯುದ್ಧದ ಕಾರಣದಿಂದ ಹೆಚ್ಚಿಸಲಾಗಿದೆ. 

ಮಾ.21 ರಂದು 111.54 ರೂ ಇದ್ದ ಪ್ರೀಮಿಯಂ ಪೆಟ್ರೋಲ್  ದರವನ್ನ 113.71 ರೂಗೆ ಏರಿಸಲಾಗಿತ್ತು. ಅಂದರೆ 2.17 ರೂ ಏರಿಸಲಾಗಿತ್ತು.‌ ಈಗ ಮಾಮೂಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನ ಏರಿಸಲಾಗಿದೆ. 

ಪೆಟ್ರೋಲ್‌ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹103.92 ಇತ್ತು. ಮೇ 15ರಿಂದ ₹106.92ಕ್ಕೆ ಹೆಚ್ಚಳವಾಗಿದೆ. ‌ಡೀಸೆಲ್‌ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹92.07 ಇತ್ತು. ಇಂದಿನಿಂದ ₹95.07ಕ್ಕೆ ಹೆಚ್ಚಳ ಆಗಿದೆ. 

https://www.suddilive.in/2026/05/House-damaged-due-to-cooking-gas-leak-fire-in-Tarikatte.html

Increase in petrol and diesel prices

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close