ಮದುವೆಯಾಗಲು ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿದ ಯುವತಿ-Young woman converts from Christianity to Hinduism to get married

 SUDDILIVE || BHADRAVATHI

ಮದುವೆಯಾಗಲು ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿದ ಯುವತಿ-Young woman converts from Christianity to Hinduism to get married 

Christian, convert

ನಗರದಲ್ಲಿ ಕ್ರೈಸ್ತಧರ್ಮದ ಯುವತಿಯನ್ನು ಮರಳಿ ಹಿಂದೂ ಧರ್ಮಕ್ಕೆ ತರುವ ಕಾರ್ಯವನ್ನು ವಿಎಚ್‌ಪಿ ಮಾಡಿದೆ. ತಾಲೂಕಿನ ಅಂತರಗಂಗೆ ವಾಸಿ ಎಂ.ಶಿವ ಕುಮಾರ್‌ಜತೆ ಹನುಮಂತ ನಗರ ಸೀಗೆ ಬಾಗಿಯ ಕ್ರಿಶ್ಚಿಯನ್ ಕುಟುಂಬದ ಯುವತಿ ಯೊಂದಿಗೆ ಮೇ 24ರಂದು ವಿಶ್ವ ಹಿಂದೂ ಪರಿಷತ್‌ನಿಂದ ನಡೆಯಲಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆ ನಿಶ್ಚಯವಾಗಿದೆ. ಆದರೆ, ಅಲ್ಲಿ ಮದುವೆ ಹಿಂದೂ ಸಂಪ್ರದಾಯದ ಪ್ರಕಾರ ನಡೆಯಲಿ ರುವುದರಿಂದ ಯುವತಿ ತಾನು ಸಹ ಹಿಂದೂ ಧರ್ಮಕ್ಕೆ ಮತಾಂತರ ಹೊಂದುವ ಅಪೇಕ್ಷೆ ವ್ಯಕ್ತಪಡಿಸಿದ್ದಾಳೆ.

ಹೀಗಾಗಿ ಜನ್ನಾಪುರ ಮಹಾಗಣಪತಿ ದೇಗುಲದ ಪ್ರಧಾನ ಅರ್ಚಕರು, ಧರ್ಮ ಜಾಗರಣಾ ಅರ್ಚಕರ ಮಹಾಸಭಾ ಸಂಸ್ಥಾ ಪಕ ಅಧ್ಯಕ್ಷ ವೇ.ಬ್ರ. ಕೃಷ್ಣಮೂರ್ತಿ ಸೋಮ ಯಾಜಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಸಿ, ಯುವತಿ ಯನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರಲಾಯಿತು. ಯುವತಿ ಕುಟುಂಬದವರು ಮೂಲತಃ ಹಿಂದೂ ಧರ್ಮಕ್ಕೆ ಸೇರಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದರು.

https://www.suddilive.in/2026/05/Increase-in-petrol-and-diesel-prices.html


Young woman converts from Christianity to Hinduism to get married

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close