SUDDILIVE || SHIVAMOGGA
ಬೈಕಿಗೆ ಡಿಕ್ಕಿ ಹೊಡೆದು ಚಿರತೆ ಸಾವು-Leopard dies after being hit by bike
ಸಕ್ರೇಬೈಲು-ಮಂಡಗದ್ದೆ ರಸ್ತೆಯಲ್ಲಿ ಬರುವ 15 ನೇ ಮೈಲಿನಗಲ್ಲಿನ ಬಳಿ ಬೈಕ್ ವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸಾವುಕಂಡಿರುವ ಘಟನೆ ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ-ಸಕ್ರೆಬೈಲಿನ ನಡುವಿನ 15 ನೇ ಮೈಲಿಗಲ್ಲಿನ ಬಳಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಎದುರಾದ ಚಿರತೆಗೆ ಡಿಕ್ಕಿ ಹೊಡೆದಿದ್ದಾನೆ. ಚಿರತೆ ರಸ್ತೆ ದಾಟುವಾಗ ಈ ಘಟನೆ ನಡೆದಿದೆಯಾ ಅಥವಾ ಬೇರೆ ರೀತಿಯಲ್ಲಿ ಹೊಡೆದಿದೆಯ ಎಂಬುದರ ಬಗ್ಗೆ ಅರಣ್ಯ ಇಲಾಖೆಯ ತನಿಖೆಯಿಂದ ತಿಳಿದು ಬರಬೇಕಿದೆ.
ಅಪಘಾತದ ರಭಸಕ್ಕೆ 2-4 ವರ್ಷದ ಹೆಣ್ಣು ಚಿರತೆ ಸ್ಥಳದಲ್ಲೇ ಸಾವು ಕಂಡಿದೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ- ಪರಿಶೀಲನೆ ನಡೆಸಿದ್ದಾರೆ.
Leopard dies after being hit by bike
