SUDDILIVE || HOLEHONNURU
ವಿದ್ಯುತ್ ಸ್ಪರ್ಶಿಸಿ ಯುವಕ ಸಾವು-Young man dies after being electrocuted
ಪಟ್ಟಣದ ಕುಂಬಾರ ಬೀದಿಯಲ್ಲಿ ಮನೆ ವಿದ್ಯುತ್ ಸ್ಪರ್ಶಿಸಿ ಯುವಕ ಚೇತನ್ (೨೮) ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮನೆ ರಿಪೇರಿ ಕೆಲಸ ಮಾಡುತ್ತಿದ್ದಾಗ ಗಾರೆ ಕೆಲಸ ಮಾಡುವವರಿಗೆ ಬಾವಿಯಿಂದ ಪಂಪ್ ಮೂಲಕ ನೀರೆತ್ತಲು ವಿದ್ಯುತ್ ಸಾಕೆಟ್‌ಗೆ ವೈರ್ ಹಾಕಲು ಹೋಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಅಸ್ವಸ್ಥನಾಗಿರುತ್ತಾನೆ. ತಕ್ಷಣ ಇಲ್ಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಷ್ಟರಲ್ಲಿ ಆಸುನೀಗಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ಚೇತನ್ ಶಿವಮೊಗ್ಗ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೃತರಿಗೆ ತಾಯಿ ಅಂಗನವಾಡಿ ಸಹಾಯಕಿ ಗೌರಮ್ಮ ಹಾಗೂ ತಮ್ಮ ಇದ್ದಾರೆ.
Young man dies after being electrocuted
