ಅಣುಸ್ಥಾವರ ನಿರ್ಮಾಣದ ಬಗ್ಗೆ ಬುಗಿಲೆದ್ದ ಆಕ್ರೋಶ-ಡಿಸಿ ಮತ್ತೊಮ್ಮೆ ಸ್ಪಷ್ಟನೆ-Outrage over nuclear plant construction - DC clarifies once again

 SUDDILIVE || SAGARA

ಅಣುಸ್ಥಾವರ ನಿರ್ಮಾಣದ ಬಗ್ಗೆ ಬುಗಿಲೆದ್ದ ಆಕ್ರೋಶ-ಡಿಸಿ ಮತ್ತೊಮ್ಮೆ ಸ್ಪಷ್ಟನೆ-Outrage over nuclear plant construction - DC clarifies once again  

Outrage, strike

ಸಾಗರ ತಾಲೂಕು ಬೇಸೂರು ಗ್ರಾಮದಲ್ಲಿ ಅಣು ಸ್ಥಾವರ ನಿರ್ಮಾಣಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಆತಂಕದ ಹಿನ್ನಲೆಯಲ್ಲಿ ಇಂದು ತೀನಾ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. 

ಬೇಸೂರು ಗ್ರಾಮದಿಂದ ಸಾಗರದ ಎಸಿ ಕಚೇರಿಯ ವರೆಗೆ 25 ಕಿಲೋಮೀಟರ್ ದೂರ ಪಾದಯಾತ್ರೆಯಲ್ಲಿ ಬಂದ ಪ್ರತಿಭಟನಾಕಾರರು ಎಸಿ ಕಚೇರಿಯಲ್ಲಿ ಬೃಹತ್ ಸಭೆ ಸೇರಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಬೇಸೂರು ಗ್ರಾಮದಿಂದ ಹೊರಟ ಪಾದಯಾತ್ರೆ ಮಧ್ಯಾಹ್ನ 2-30 ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದು ತಲುಪಿದೆ. 

ಅಣು ಸ್ಥಾವರ ನಿರ್ಮಾಣದ ಬಗ್ಗೆ  ಅನುಮತಿ ನೀಡಿಲ್ಲ 

ಬೇಸೂರು ಗ್ರಾಮದಲ್ಲಿ ಅಣು ಸ್ಥಾವರ ನಿರ್ಮಾಣ ಮಾಡಲು ಡಿಸಿ ಅವರು ವಿಡಿಯೋ ಕಾನ್ಫೆರೆನ್ಸ್ ನಲ್ಲಿ 3100 ಕ್ಕೂ ಹೆಚ್ಚು ಎಕರೆ ಜಮೀನನ್ನ NTPC ಗೆ ನೀಡಲು ಸಿದ್ದರಿದ್ದಾರೆ ಎಂಬ ಮಾಹಿತಿ ಹರಡಿಕೊಂಡಿತ್ತು. ಆದರೆ ರಾಷ್ಟ್ರಭಕ್ತರ ಬಳಗ ಸುದ್ದಿಗೋಷ್ಠಿ ನಡೆಸಿ ರಾಯಚೂರು, ಕೊಪ್ಪಳ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಡಿಸಿ ಅವರೊಂದಿಗೆ ವಿಸಿ ನಡೆದಿದ್ದು ವಿಸಿಯಲ್ಲಿ ಶಿವಮೊಗ್ಗ ಡಿಸಿ ಹೊರತು ಪಡಿಸಿ ಉಳಿದ ನಾಲ್ಕು ಜಿಲ್ಲ ಡಿಸಿ ಅವರು ಜಾಗವಿಲ್ಲ ಎಂದಿದ್ದರೆ ಶಿವಮೊಗ್ಗ ಡಿಸಿಯವರು ಜಾಗವಿದೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೆ ಬೇಸೂರು ಗ್ರಾಮದಲ್ಲಿ ಆತಂಕ ಹೆಚ್ಚಾಗಿತ್ತು. 


ರಾಷ್ಡ್ರಭಕ್ತರ ಬಳಗದ ಸುದ್ದಿಗೋಷ್ಠಿ ನಡೆಯುವ ಮುಂಚೆ ಅಣು ಸ್ಥಾವರ ನಿರ್ಮಾಣಕ್ಕೆ ಖುದ್ದು ಡಿಸಿ ಅವರು ಪತ್ರಿಕಾ ಹೇಳಿಕೆ ನೀಡಿ ಬೇಸೂರು ಗ್ರಾಮದಲ್ಲಿ ಜಾಗವಿಲ್ಲ ಎಂದಿದ್ದರು. ಆದರೆ ಯಾವಾಗ ರಾಷ್ಟ್ರಭಕ್ತರ ಬಳಗ ಜಾಗವಿದೆ ಎಂದು ಡಿಸಿ ಅವರು ದಾಖಲಾತಿಸಮೇತ ಸುದ್ದಿಗೋಷ್ಠಿ ನಡೆಸಿದರೋ ಈ ಆತಂಕಕ್ಕೆ ಹೆಚ್ಚು ಕಿಚ್ಚು ಹೊತ್ತುಕೊಂಡು ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿತ್ತು. 

ಇಲ್ಲಿ ಡಿಸಿ ಅವರು ಸರಿನಾ‌ ಅಥವಾ ರಾಷ್ಟ್ರಭಕ್ತರ ಬಳಗ ಸರಿಯಾಗಿದೆಯಾ ಎಂಬುದನ್ನ‌ ಕಾಲವೇ ಹೇಳಬೇಕಿದೆ. ಇಂದು ಎಸಿ ಕಚೇರಿಯಲ್ಲಿ ಸಂಸದರು ಶಾಸಕರು ಮತ್ತಿತರು ಪಕ್ಷಾತೀತವಾಗಿ ಪಾಲ್ಗೊಂಡು ಅಣುಸ್ಥಾವರ ನಿರ್ಮಾಣದ ಬಗ್ಗೆ ವೀರಾವೇಶದ ಮಾತನಾಡಿ ಜನರ ಧ್ವನಿಯಾಗಿರುವುದಾಗಿ ಭರವಸೆ ನೀಡಿದ್ದಾರೆ. ಜನಪ್ರತಿನಿಧಿಗಳ ಈ ಭರವಸೆಯನ್ನ ಜನ ಹೇಗೆ ನಂಬುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ. 

ಡಿಸಿ ಸ್ಪಷ್ಟನೆ

ಅಣುಸ್ಥಾವರ ಪ್ರಸ್ತಾವನೆ ಬಗ್ಗೆ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾಡಳಿತದ ಮುಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವ ಪ್ರಸ್ತಾವನೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಡಿಸಿದ್ದಾರೆ. ವಿಮಾನ ಹಾರಾಟದ ಬಗ್ಗೆನೂ ಪ್ರತಿಭಟನೆಯಲ್ಲಿ ಜನ ಪ್ರಶ್ನಿಸಿದ್ದು ವಿಮಾನ ಅತಿ ಕೆಳಗೆ ಹಾರಾಟ ನಡೆಸಿದ್ದು ಖನಿಜ ಮತ್ತು ದ್ರವ ಪದಾರ್ಥದಲ್ಲಿರುವ ವಸ್ತುವನ್ನ ತಿಳಿಯುವ ಬಗ್ಗೆ ಈ ಹಾರಾಟ ನಡೆದಿದೆ. ಇದು ವರ್ಷಕ್ಕೊಮ್ಮೆ ಭಾರತದ ಯಾವುದೇ ಭೂಪ್ರದೇಶವನ್ನ ಸರ್ವೆ ಮಾಡಲಾಗುತ್ತೆ ಎಂದು ಡಿಸಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

ಒಟ್ಟಿನಲ್ಲಿ ಅಣು ಸ್ಥಾವರದ ಬಗ್ಗೆ ಗೊಂದಲಗಳು ಹೆಚ್ಚಾಗಿದೆ. ಈ ಗೊಂದಲವನ್ನ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಹೇಗೆ ನಿವಾರಿಸುತ್ತಾರೆ ಎಂಬುದನ್ನ‌ಕಾದು ನೋಡಬೇಕಿದೆ. 

Outrage over nuclear plant construction - DC clarifies once again

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close