SUDDILIVE || SHIVAMOGGA
ಮುನಿಯಪ್ಪರನ್ನ ಡಿಸಿಎಂ ಮಾಡುವಂತೆ ಪ್ರತಿಭಟನೆ-Protest to make Muniyappa DCM
ರಾಜ್ಯ ದಲಿತ ಸಮುದಾಯದ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಡಾಕ್ಟರ್ ಕೆ ಎಚ್ ಮುನಿಯಪ್ಪನವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ಹಿಂದೂ ಶಿವಪ್ಪ ನಾಯಕ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು.
ಮುನಿಯಪ್ಪನವರು ಕೋಲಾರ ಲೋಕಸಭಾ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಹಾಗೂ ಪ್ರಸ್ತುತ ರಾಜ್ಯ ಸಚಿವರಾಗಿ ದೀರ್ಘಕಾಲದ ಆಡಳಿತ ಅನುಭವ ಹೊಂದಿರುವ ಕಾಂಗ್ರೆಸ್ ನ ನಿಷ್ಠಾವಂತ ಹಾಗೂ ಜನಪರ ನಾಯಕರಾಗಿದ್ದಾರೆ ಐದು ದಶಕಗಳಿಂದ ಪಕ್ಷ ಸಂಘಟನೆ ದಲಿತ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟ ನಡೆಸಿಕೊಂಡು ಬಂದಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ಸಮುದಾಯದ ಭಾವನೆಗಳಿಗೆ ಸ್ಪಂದಿಸಿ ಡಾ. ಕೆ ಹೆಚ್ ಮುನಿಯಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದು ರಾಜ್ಯದ ಮಾದಿಗ ಸಮುದಾಯದ ಪರವಾಗಿ ಮಹಾಸಭಾ ಆಗ್ರಹಿಸಿದೆ.
ಮಹಾಸಭಾದ ಜಿಲ್ಲಾಧ್ಯಕ್ಷವಾಗಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಕ್ಷ ರಮೇಶ್ ಪುರ್ಲೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Protest to make Muniyappa DCM

